ವಿಜಯಪುರ: ಮಕ್ಕಳಿಗೆ ಪಾಠಗಳ ಜೊತೆಗೆ ಆಟವೂ ತುಂಬಾ ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಲು ಸಾಧ್ಯ ಎಂದು ಸೈಕ್ಲಿಂಗ್ ಅಮೇಚೂರ ಸಂಘದ ರಾಜ್ಯಾಧ್ಯಕ್ಷ ರಾಜು ಬಿರಾದಾರ ಹೇಳಿದ್ದಾರೆ.
ನಗರದ ಪ್ರತಿಷ್ಟಿತ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿಯೂ ಶ್ರಮವಹಿಸಿ ಶ್ರದ್ದೆಯಿಂದ ತೊಡಗಿಸಿಕೊಂಡರೆ ರಾಷ್ಟ್ರೀಯ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿ ಜೀವನ ರೂಪಿಸಿಕೊಳ್ಳಬಹುದು. ಅಲ್ಲದೇ, ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಬಹುದು. ಅಲ್ಲದೆ ಕ್ರೀಡಾಪಟುಗಳಿಗೆ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಮಿಸಲಾತಿ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಕ್ರೀಡಾ ಸಾಧಕರ ಸಾಧನೆ ಮತ್ತು ಕೊಡುಗೆಯನ್ನು ಉದಾಹರಣೆ ಸಹಿತ ವಿವರಿಸಿದರು.
ಬಿ ಎಲ್ ಡಿ ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಪ್ರೊ. ಎಸ್. ಎಸ್. ಕೋರಿ ಅವರು ಮಕ್ಕಳ ಕವಾಯತ್ ನಮನವನ್ನು ಸ್ವೀಕರಿಸಿದರು. ಶಾಲಾ ಆಡಳಿತಾಧಿಕಾರಿ ಕೌಶಿಕ್ ಬ್ಯಾನರ್ಜಿ ಅವರು ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಜುಂಬಾ ನೃತ್ಯ, ಕಂಸಾಳೆ ಕುಣಿತ, ಯೋಗ, ಕರಾಟೆ ಪ್ರದರ್ಶನ, ಪ್ರೇಕ್ಷಕರನ್ನು ರಂಚಿಸಿದವು. ನಂತರ ರಿಲೆ, 100 ಮೀ. ಮತ್ತು 200 ಮೀ ಅಂತಿಮ ಸುತ್ತಿನ ಓಟದ ಸ್ಪರ್ಧೆಗಳು ಹಾಗೂ ನಾನಾ ಬಗೆಯ ಕ್ರೀಡೆಗಳುಗಮನ ಸೆಳೆದವು. ವಿಜೇತ ಸದನದ ತಂಡಕ್ಕೆ ಅಥಿತಿಗಳು ಟ್ರೋಪಿ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯೆ ಬಂಧನಾ ಬ್ಯಾನರ್ಜಿ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಜಲನಗರ ಉಪಶಾಖೆಯ ಪ್ರಾಚಾರ್ಯ ದರ್ಶನ ಹುನಗುಂದ ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಮುಖ್ಯಸ್ಥೆ ನೀತಾ ಮಠ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಸಾಯಿರಾ ಶೇಖ್ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

