ಎಬಿವ್ಹಿಪಿ ೬೯ನೇ ರಾಷ್ಟ್ರೀಯ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಷಾ ಸ್ಪಷ್ಠನೆ
ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ೬೯ನೇ ರಾಷ್ಟ್ರೀಯ ಅಧಿವೇಶನವು ದೆಹಲಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು ಎಂದು ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ತಿಳಿಸಿದರು.
ಈ ಕುರಿತು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ವೈಭವದ ರಾಷ್ಟ್ರೀಯ ಅಧಿವೇಶನದಲ್ಲಿ ಭಾರತಾದ್ಯಂತದಿಂದ ೧೦,೦೦೦ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜಶರಣ್ ಶಾಯಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಯಜ್ಞವಲ್ಕ್ಯ ಶುಕ್ಲಾ ರವರು ಮರು ಆಯ್ಕೆಯಾದರು ಎಂದು ತಿಳಿಸಿದರು.
೬೯ನೇ ರಾಷ್ಟ್ರೀಯ ಅಧಿವೇಶನದ ಉದ್ಘಾಟನೆಯನ್ನು ಭಾರತ ಸರ್ಕಾರದ ಗೃಹ ಮಂತ್ರಿ ಅಮಿತ್ ಷಾ ಉದ್ಘಾಟಿಸಿ, ಜಮ್ಮು ಮತ್ತು ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗವೆಂದು ವಿದ್ಯಾರ್ಥಿ ಪರಿಷತ್ ಮೊದಲಿನಿಂದಲೂ ಹೇಳಿಕೊಂಡು ಬಂದಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೇ ಪಿ.ಓ.ಕೆ.ಯೂ ಕೂಡಾ ನಮ್ಮದೇ ಎಂದು ಸ್ಪಷ್ಠಪಡಿಸಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಭಾಗ ಸಹ ಪ್ರಮುಖ ಅಮೀತಕುಮಾರ ಬಿರಾದಾರ, ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ಮಹಾನಗರ ಕಾರ್ಯದರ್ಶಿ ಕುಮಾರಿ ಕವಿತಾ ಬಿರಾದಾರ ಸೇರಿದಂತೆ ಇನ್ನಿತರರಿದ್ದರು.

