Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವೃಕ್ಷೊಥಾನ್ ಹೆರಿಟೇಜ್ ರನ್ ರೂಟ್ ಮ್ಯಾಪ್ ಸಿದ್ಧ
(ರಾಜ್ಯ ) ಜಿಲ್ಲೆ

ವೃಕ್ಷೊಥಾನ್ ಹೆರಿಟೇಜ್ ರನ್ ರೂಟ್ ಮ್ಯಾಪ್ ಸಿದ್ಧ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಗುಮ್ಮಟ ನಗರಿಯಲ್ಲಿ ಈ ಬಾರಿ ನಡೆಯುತ್ತಿರುವ ವೃಕ್ಷೊಥಾನ್ ಹೆರಿಟೇಜ್ ರನ್-2023ಕ್ಕೆ 8200ಕ್ಕೂ ಹೆಚ್ಚು ಜನರು ತಮ್ಮ ಹೆಸರು ನೋಂದಾಯಿಸಿದ್ದು, ಡಿ. 23 ರಂದು ಶನಿವಾರ ಸ್ಥಳದಲ್ಲಿಯೇ ಹೆಸರು ನೋಂದಾವಣಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.  ಅಷ್ಟೇ ಅಲ್ಲ, ನಾನಾ ವಿಭಾಗಗಳಲ್ಲಿ ನಡೆಯಲಿರುವ ಈ ಓಟದ ರೂಟ್ ಮ್ಯಾಪ್ ಕೂಡ ಸಿದ್ಧವಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ಭರದಿಂದ ಸಾಗಿವೆ.  ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಜನಜಾಗೃತಿ ಹಾಗೂ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಆಯೋಜಿಸಲಾಗಿರುವ ಈ ಓಟಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪುರುಷ ಮತ್ತು ಮಹಿಳಾ ಓಟಗಾರರು ಸೇರಿದಂತೆ ಈ ಬಾರಿ 8200ಕ್ಕೂ ಹೆಚ್ಚು ಓಟಗಾರರು ಆನಲೈನ್ ಮೂಲಕ ಹೆಸರು ನೋಂದಾಯಿಸಿದ್ದಾರೆ. 
21 ಕಿ. ಮಿ. ವಿಭಾಗದಲ್ಲಿ 525 ಜನ, 10 ಕಿ. ಮೀ. ವಿಭಾಗದಲ್ಲಿ 250 ಜನ, 5 ಕಿ. ಮೀ. ವಿಭಾಗದಲ್ಲಿ 1200 ಜನ, 3.50 ಕಿ. ಮೀ ವಿಭಾಗದಲ್ಲಿ 6000 ಹಾಗೂ 800 ಮೀ. ವಿಭಾಗದಲ್ಲಿ 51 ಜನ ಓಟಗಾರರು ಆನಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 
ಈಗಾಗಲೇ ಆನಲೈನ್ ನೋಂದಣಿ ಮುಕ್ತಾಯಗೊಂಡಿದ್ದರೂ, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಡಿ. 23 ರಂದು ಶನಿವಾರ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗುವುದು. ಕೆಲವೇ ಪ್ರವೇಶಗಳು ಬಾಕಿ ಇವೆ. ಅಲ್ಲದೇ, ಈ ಸಂದರ್ಭದಲ್ಲಿ ಬಿಬ್, ಟಿ-ಶರ್ಟ್ ವಿತರಣೆ ಮಾಡಲಾಗುತ್ತಿದೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್- 2023 ನೋಂದಣಿ ಸಮಿತಿಯ ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ವೀರೇಶ ಗುಚ್ಚೆಟ್ಟಿ ತಿಳಿಸಿದ್ದಾರೆ. 
*ರೂಟ್ ಮ್ಯಾಪ್ ಮಾಹಿತಿ ಇಲ್ಲಿದೆ.*
ಈ ಮಧ್ಯೆ, ನಾನಾ ವಿಭಾಗಗಳಲ್ಲಿ ನಡೆಯಲಿರುವ ಓಟಗಳ ರೂಟ್ ಮ್ಯಾಪ್(ಮಾರ್ಗ ನಕ್ಷೆ)ಯನ್ನು ರೂಟ್ ಸಮಿತಿಯ ಸಂಕೇತ ಬಗಲಿ ಮತ್ತು ಸೋಮಶೇಖರ ಸ್ವಾಮಿ ಸಿದ್ಧಪಡಿಸಿದ್ದಾರೆ.  ಈ ಮಾರ್ಗಗಳಲ್ಲಿ ಅಲ್ಲಲ್ಲಿ ಒಂಬತ್ತು ಕಡೆಗಳಲ್ಲಿ ಜಲಸಂಚಯ(ಹೈಡ್ರೇಶನ್) ಕೇಂದ್ರಗಳನ್ನು ತೆರಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
*ವಿಭಾಗವಾರು ಓಟಗಳ ಪ್ರಾರಂಭ ಮತ್ತು ಮುಕ್ತಾಯದ ರೂಟ್ ಮ್ಯಾಪ್ ಮತ್ತು ಹೈಡ್ರೆಶನ್ ಕೇಂದ್ರಗಳ ಮಾಹಿತಿ ಇಲ್ಲಿದೆ.*
*21 ಕಿ. ಮೀ. ವಿಭಾಗ*
ಸಮಯ: ಪ್ರಾರಂಭ *ಬೆಳಿಗ್ಗೆ 6 ಗಂಟೆ*, ಮುಕ್ತಾಯ ಸಮಯ- *ಬೆಳಿಗ್ಗೆ 9.30ರೊಳಗೆ* 
ಓಟ ಪ್ರಾರಂಭ ಸ್ಥಳ: *ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ*
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್ *(ಹೈಡ್ರೇಶನ್ ಪಾಯಿಂಟ್),* ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾ ಕಮಾನ್(ಹೈಡ್ರೇಶನ್ ಪಾಯಿಂಟ್), ಬಸವೇಶ್ವರ ಚೌಕ್, ಗಾಂಧಿ ಚೌಕ್ *(ಹೈಡ್ರೇಶನ್ ಪಾಯಿಂಟ್),* ಶಿವಾಜಿ ಚೌಕ್ *(ಹೈಡ್ರೇಶನ್ ಪಾಯಿಂಟ್),* ವಾಟರ್ ಟ್ಯಾಂಕ್, ಜಿಲ್ಲಾಸ್ಪತ್ರೆ, ಇಟಗಿ ಪೆಟ್ರೋಲ್ ಪಂಪ್ ಬಳಿ ಯು ಟರ್ನ್, ಸೈನಿಕ ಶಾಲೆ ಗೇಟ್ ನಂಬರ್-2, ಮೂಲಕ ಒಳಪ್ರವೇಶ, ಸೈನಿಕ ಶಾಲೆಯ ಮುಖ್ಯ ಕಟ್ಟಡ *(ಹೈಡ್ರೇಶನ್ ಪಾಯಿಂಟ್),* ಸೈನಿಕ ಶಾಲೆಯ ಗೇಟ್ ನಂಬರ್-1ರ ಮೂಲಕ ನಿರ್ಗಮನ, ವಾಟರ್ ಟ್ಯಾಂಕ್ *(ಹೈಡ್ರೇಶನ್ ಪಾಯಿಂಟ್),* ದರ್ಗಾ ಕ್ರಾಸ್, ಬಿ.ಎಲ್.ಡಿಇ. ಸಂಸ್ಥೆಯ ಮುಖ್ಯ ಧ್ವಾರದ ಮೂಲಕ ಒಳಪ್ರವೇಶ, ಬಿ.ಎಲ್.ಡಿ.ಇ ಕ್ಯಾಂಪಸ್ *(ಹೈಡ್ರೇಶನ್ ಪಾಯಿಂಟ್),* ಬಿ.ಎಲ್.ಡಿ.ಇ ಸಂಸ್ಥೆ ಶ್ರೀ ಬಿ. ಎಂ. ಪಾಟೀಲ ಆಸ್ಪತ್ರೆಯ ಮೂಲಕ ನಿರ್ಗಮನ, ಬಿ.ಎಲ್.ಡಿ.ಇ ಸಂಸ್ಥೆ ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಜ್ಞಾನಯೋಗಾಶ್ರಮದಲ್ಲಿ ಒಳಪ್ರವೇಶ *(ಹೈಡ್ರೇಶನ್ ಪಾಯಿಂಟ್),* ಮತ್ತು ಜ್ಞಾನಯೋಗಾಶ್ರಮದಿಂದ ನಿರ್ಗಮನ, ಆಶ್ರಮ ರಸ್ತೆ, ಶ್ರೀ ಸಿದ್ಧೇಶ್ವರ ದೇವಸ್ಥಾನ *(ಹೈಡ್ರೇಶನ್ ಪಾಯಿಂಟ್),* ಗಾಂಧಿ ಚೌಕ್ *(ಹೈಡ್ರೇಶನ್ ಪಾಯಿಂಟ್),* ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ(ಮುಕ್ತಾಯ).
*10 ಕಿ. ಮೀ. ವಿಭಾಗ*
ಸಮಯ: ಪ್ರಾರಂಭ *ಬೆಳಿಗ್ಗೆ 6.45 ಗಂಟೆ,* ಮುಕ್ತಾಯ ಸಮಯ- *ಬೆಳಿಗ್ಗೆ 8.45ರೊಳಗೆ* 
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್ *(ಹೈಡ್ರೇಶನ್ ಪಾಯಿಂಟ್),* ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾ ಕಮಾನ್(ಹೈಡ್ರೇಶನ್ ಪಾಯಿಂಟ್), ಬಸವೇಶ್ವರ ಚೌಕ್, ಗಾಂಧಿ ಚೌಕ್ *(ಹೈಡ್ರೇಶನ್ ಪಾಯಿಂಟ್),* ಶಿವಾಜಿ ಚೌಕ್ *(ಹೈಡ್ರೇಶನ್ ಪಾಯಿಂಟ್),* ವಾಟರ್ ಟ್ಯಾಂಕ್, ಸೆಟಲೈಟ್ ಬಸ್ ನಿಲ್ದಾಣದಿಂದ ಯು ಟರ್ನ್, ಮರಳಿ ಅದೇ ಮಾರ್ಗವಾಗಿ ವಾಟರ್ ಟ್ಯಾಂಕ್ *(ಹೈಡ್ರೇಶನ್ ಪಾಯಿಂಟ್),* ಶಿವಾಜಿ ಚೌಕ್, ಗಾಂಧಿಚೌಕ್ *(ಹೈಡ್ರೇಶನ್ ಪಾಯಿಂಟ್),* ಬಾರಾ ಕಮಾನ, ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ(ಮುಕ್ತಾಯ).
*5 ಕಿ. ಮೀ. ವಿಭಾಗ*
ಸಮಯ: ಪ್ರಾರಂಭ *ಬೆಳಿಗ್ಗೆ 7.30 ಗಂಟೆ*, ಮುಕ್ತಾಯ ಸಮಯ- ನಿಗದಿ ಇಲ್ಲ. 
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್ *(ಹೈಡ್ರೇಶನ್ ಪಾಯಿಂಟ್),* ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಬಸವೇಶ್ವರ ಚೌಕ್, ಗಾಂಧಿ ಚೌಕ್ *(ಹೈಡ್ರೇಶನ್ ಪಾಯಿಂಟ್) ಯೂ ಟರ್ನ್*, ಬಾರಾ ಕಮಾನ, ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ(ಮುಕ್ತಾಯ).
*3.50 ಕಿ. ಮೀ. ವಿಭಾಗ*
ಸಮಯ: ಪ್ರಾರಂಭ *ಬೆಳಿಗ್ಗೆ 8 ಗಂಟೆ*, ಮುಕ್ತಾಯ ಸಮಯ- ನಿಗದಿ ಇಲ್ಲ. 
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್ *(ಹೈಡ್ರೇಶನ್ ಪಾಯಿಂಟ್)*, ಮರಳಿ ಅದೇ ರಸ್ತೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ(ಮುಕ್ತಾಯ).
*800 ಮೀಟರ್ ವಿಭಾಗ(ಮಕ್ಕಳಿಗಾಗಿ)*
ಸಮಯ: ಪ್ರಾರಂಭ *ಬೆಳಿಗ್ಗೆ 8.15 ಗಂಟೆ*, ಮುಕ್ತಾಯ ಸಮಯ- ನಿಗದಿ ಇಲ್ಲ. 
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಒಳಾಂಗಣ.
*ಹೈಡ್ರೇಶನ್ ಪಾಯಿಂಟ್ಸ್*
ಈ ಹೈಡ್ರೇಶನ್ ಪಾಯಿಂಟ್ಸ್ ಗಳಲ್ಲಿ ಓಟಗಾರರು ಮಾರ್ಗ ಮಧ್ಯದಲ್ಲಿ ಬಾಯಾರಿಕೆ ನೀಗಿಸಲು, ದೇಹಕ್ಕೆ ಅಗತ್ಯವಾಗಿರುವ ಉಪ್ಪಿನಂಶ ಮತ್ತೀತರ ಶಕ್ತಿವರ್ಧಕ ಪಾನೀಯಗಳು, ಬಾಳೆಹಣ್ಣು, ಗ್ಲುಕೋಸ್ ಯುಕ್ತ ನೀರಿನ ವ್ಯವಸ್ಥೆ ಇರಲಿದೆ.
*ಪಾರ್ಕಿಂಗ್, ವಾಹನ ಸಂಚಾರ ವಿವರ*
ನೋಂದಣಿ ಮಾಡಿದವರಿಗೆ ಮಾತ್ರ ಈ ಓಟದಲ್ಲಿ ಪ್ರವೇಶ ಇರುತ್ತದೆ.  ಉಳಿದವರಿಗೆ ಈ ಓಟದಲ್ಲಿ ಪ್ರವೇಶ ಇರುವುದಿಲ್ಲ. ಅಲ್ಲದೇ, ಪ್ರತಿಯೊಂದನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಲಾಗುತ್ತದೆ. 
ಡಿಸೆಂಬರ್ 24 ರಂದು ವೃಕ್ಷೊಥಾನ್ ಹೆರಿಟೇಜ್ ರನ್-2023 ನಡೆಯುವ ದಿನ ನಸುಕಿನ ಜಾವ ಬೆಳಿಗ್ಗೆ 5.30ರ ಒಳಗೆ ದರಬಾರ ಹೈಸ್ಕೂಲ್ ಮೈದಾನದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ನಂತರ ಬೆಳಿಗ್ಗೆ 5.30 ರಿಂದ ಬೆಳಿಗ್ಗೆ 9.30ರ ವರೆಗೆ ನಾಲ್ಕು ಗಂಟೆಗಳ ಕಾಲ ರಸ್ತೆಗಳಲ್ಲಿ ಮ್ಯಾರಾಥಾನ್ ಸ್ಪರ್ಧಾಳುಗಳಿಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುವವರು ಹಾಗೂ ವೀಕ್ಷಣೆಗೆ ಬರುವ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪಾರ್ಕಿಂಗ್ ಮಾಡಿ, ಸಹಕರಿಸಬೇಕು ಎಂದು ಸಂಕೇತ ಬಗಲಿ ಮತ್ತು ಸೋಮಶೇಖರ ಸ್ವಾಮಿ ಕೋರಿದ್ದಾರೆ. 
ಒಟ್ಟಾರೆ, ವೃಕ್ಷೊಥಾನ್ ಹೆರಿಟೇಜ್ ರನ್- 2023 ಸಂಪೂರ್ಣ ಯಶಸ್ಸಿಗೆ ನಾನಾ ಕೋರ್ ಕಮಿಟಿಗಳು ಜಿಲ್ಲಾಡಳಿತದ ಸಹಯೋಗದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಂಡಿವೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026
    In ದಿನಪತ್ರಿಕೆ
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.