Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಿ.೨೨-೨೩ರಂದು ಕಾಳಿದಾಸನ ಕಾವ್ಯ ರಸಾಸ್ವಾದ & ಸಾಹಿತ್ಯ ಸಂಭ್ರಮ
(ರಾಜ್ಯ ) ಜಿಲ್ಲೆ

ಡಿ.೨೨-೨೩ರಂದು ಕಾಳಿದಾಸನ ಕಾವ್ಯ ರಸಾಸ್ವಾದ & ಸಾಹಿತ್ಯ ಸಂಭ್ರಮ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-೮,
ಸಾಹಿತ್ಯ ಸಂಭ್ರಮ ಹಾಗೂ ಭಾರತೀಯ ಕೃಷಿ ಸಂಸ್ಕೃತಿ ವಿಶೇಷ ಕಾರ್ಯಕ್ರಮವನ್ನು ವಿಜಯಪುರದ
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಡಿ.೨೨ ಹಾಗೂ ೨೩ ರಂದು ತೊರವಿ ರಸ್ತೆಯ ಶ್ರೀ
ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪದವಿ
ಕಾಲೇಜ ಚೇರಮನ್ ಪ್ರೊ. ವಿ. ಡಿ.ವಸ್ತ್ರದ ಹೇಳಿದರು.
ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಸಿದ್ದೇಶ್ವರ ಶ್ರೀಗಳ ಆಶಯದಂತೆ
ಪ್ರತಿ ತಿಂಗಳು ದೇಶದ ಸಂಸ್ಕೃತಿ ಉಳಿವಿಗಾಗಿ ಪ್ರತಿ ತಿಂಗಳು ವಿಶೇಷ ಉಪನ್ಯಾಸಗಳನ್ನು
ಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ಪ್ರತಿ ವರ್ಷ ಇಂತಹ ಕಾರ್ಯಕ್ರಮ
ನಡೆಸಲಾಗುತ್ತಿದೆ ಎಂದರು.
ಇದರ ಉದ್ಘಾಟನೆಯು ೨೨ ರಂದು ನಡೆಯಲಿದೆ. ಜ್ಞಾನಯೋಗಾಶ್ರಮದ
ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮಿಗಳ ಪಾವನ ಸಾನಿಧ್ಯದಲ್ಲಿ, ಪರಮಪೂಜ್ಯ
ಶ್ರೀ ನಿತ್ಯಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಉದ್ಘಾಟನೆಯನ್ನು ಶ್ರೀ ಸಿದ್ಧಯ್ಯ
ಆಧುನಿಕ ಒಡೆಯರು, ಬೀದರ ಇವರು ನಡೆಸಿಕೊಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು
ಎಸ್. ಎ. ಜಿದ್ದಿ ವಹಿಸಲಿದ್ದಾರೆ ಎಂದರು.
ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-೮ ಮೇಘದೂತ ಖಂಡಕಾವ್ಯದ ಪೂರ್ವಭಾಗದ
ಉಪನ್ಯಾಸವನ್ನು ಸಿಕ್ಯಾಬ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಶ್ರೀಕೃಷ್ಣ
ಕಾಖಂಡಕಿ ಅವರು ನಡೆಸಿಕೊಡಲಿದ್ದಾರೆ. ಮೇಘದೂತ ಖಂಡಕಾವ್ಯದ ಉತ್ತರಭಾಗದ ಉಪನ್ಯಾಸವನ್ನು
ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಾಧಿಪತಿಗಳಾದ ಪಂ. ಮಧ್ವಾಚಾರ್ಯ ಮೊಕಾಶಿ ಅವರು
ಮಾಡಲಿದ್ದಾರೆ. ಜಿ. ಎಚ್. ಮರನೂರ ಎಸ್. ಎಸ್.ಗೌಡಪ್ಪಗೋಳ ಅವರು ಕಾರ್ಯಕ್ರಮ
ನಿರೂಪಣೆ ಮಾಡಲಿದ್ದಾರೆ.
ಸಾಹಿತ್ಯ ಸಂಭ್ರಮದ ಉಪನ್ಯಾಸಗಳನ್ನು ಅನುಭಾವಿ ಕವಿ ಹಲಸಂಗಿ ಮಧುರಚೆನ್ನರ ಕುರಿತು
ಇಂಡಿಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಕೆ. ಕೊಪ್ಪ, ನಿಸರ್ಗ ಕವಿ ವರ್ಡ್ಸ್ವರ್ತ ಕುರಿತು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಆಂಗ್ಲ ಪ್ರಾಧ್ಯಾಪಕ ಡಾ. ಬಸವರಾಜ
ಡೋಣೂರು, ಹಾಗೂ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಅಶೋಕ ಹಂಚಲಿ ಅವರು
ಮಾಡಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಎಸ್.ಡಿ.ದುರಗಣ್ಣವರ
ಎಸ್.ಎನ್.ಪ್ಯಾಟಿಗೌಡರ ನಡೆಸಿಕೊಡಲಿದ್ದಾರೆ.
ಸಾಯಂಕಾಲ ಶ್ರೀ ಸದ್ಗುರು ಪರಂಪರೆ ಸಂಜೆ ೬ ರಿಂದ ಸತ್ಸಂಗ ಹಾಗೂ ಭಜನೆ ಹಾಗೂ
ಇಂಚಗೇರಿ ಸಂಪ್ರದಾಯ ಕುರಿತು ನಿವೃತ್ತ ಉಪನಿಬಂಧಕರಾದ ಬಿ. ಆರ್. ಬನಸೋಡೆ
ಮಾಡಲಿದ್ದಾರೆ.
ಬೆಳಿಗ್ಗೆ ಕಾರ್ಯಕ್ರಮ ಪೂರ್ವ ಮುಂಜಾನೆ ೮.೩೦ ಗಂಟೆಗೆ ಶ್ರೀ ಸಿದ್ದೇಶ್ವರ
ದೇವಾಲಯದಿಂದ ಕಾಳಿದಾಸ ಶಿಕ್ಷಣ ಸಂಸ್ಥೆಯವರೆಗೆ ವಾರ್ಕರಿ ಭಜನೆ, ಡೊಳ್ಳುವಾದ್ಯ,
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರ ಜಯಘೋಷದೊಂದಿಗೆ ಶ್ರೀ ಕಾಳಿದಾಸರ, ಸ.ಸ.
ಭಾವುಸಾಹೇಬ ಮಹಾರಾಜರ, ಸ.ಸ. ರಾಮರಾವ ಮಹಾರಾಜರ ಮತ್ತು ಸ.ಸ. ರಂಗರಾವ ಮಹಾರಾಜರ
ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ.
೨೩ ರಂದು ರಾಷ್ಟ್ಕೀಯ ರೈತ ದಿನಾಚರಣೆ ನಿಮಿತ್ಯ ಕೃಷಿ ಇಲಾಖೆ ಹಾಗೂ ಕೃಷಿ
ವಿಶ್ವವಿದ್ಯಾಲಯ ವಿಜಯಪುರ ಸಹಯೋಗದಲ್ಲಿ ಭಾರತೀಯ ಕೃಷಿ ಪದ್ದತಿ ಅಳವಡಿಕೆಯಲ್ಲಿ ಸಂವಾದ
ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಡಾ.ಆರ್.ಬಿ.ಬೆಳ್ಳಿ
ಹೇಳಿದರು.
ಆಹಾರ ವಿಷಮುಕ್ತವಾಗುತ್ತಿದೆ ರಾಸಾಯನಿಕ ಬಳಕೆ ಅಧಿಕವಾಗುತ್ತಿದೆ, ಈ ಹಿನ್ನೆಲೆಯಲ್ಲಿ
ಸಾಧಕ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ
ಸಹಜ ಕೃಷಿ ಬಳಕೆ ಮಾಡುವ ಸಂಬಂಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಧರ್ಭದಲ್ಲಿ ೧೦
ಜನ ಕೃಷಿ ಸಾಧಕ ರೈತರಿಗೆ ನವದೆಹಲಿಯ ಚೇರಮನ್ನರಾದ ಡಾ. ಅಶೋಕ ದಳವಾಯಿ ಅವರಿಂದ ವಿಸ್ಕ ಅಗ್ರೋ ರಾಷ್ಟ್ರೀಯ ರೈತ ಪುರಸ್ಕಾರ ಮಾಡಲಾಗುವುದು. ಇಲ್ಲಿಯೇ ೧೦ ಮಳಿಗೆಗಳನ್ನು ಹಾಕಿ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
೨೩ ರಂದು ಭಾರತೀಯ ಪ್ರಾಚೀನ ಕೃಷಿ ಸಂಸ್ಕೃತಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೃಷಿ
ಮತ್ತು ರೈತ ಕಲ್ಯಾಣ ಮಂತ್ರಾಲಯ, ಭಾರತ ಸರಕಾರ, ನವದೆಹಲಿಯ ಚೇರಮನ್ನರಾದ ಡಾ. ಅಶೋಕ
ದಳವಾಯಿ ಅವರು ಉದ್ಘಾಟನೆಯನ್ನು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಜಂಟಿ
ನಿರ್ದೆಶಕರಾದ ಡಾ. ವಿಲಿಯಂ ರಾಜಶೇಖರ ಆಗಮಿಸಲಿದ್ದಾರೆ. ಆಶಯ ಭಾಷಣ ಲಕ್ಷ್ಮೀಬಾಯಿ
ಭಾವುರಾವ ಪಾಟೀಲ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಮಹಾದೇವ ಕೋರಿ ಅವರು
ನಡೆಸಿಕೊಡಲಿದ್ದಾರೆ ಸಮಾರಂಭದ ಅಧ್ಯಕ್ಷತೆಯನ್ನು ಎಸ್. ಎ. ಜಿದ್ದಿ ವಹಿಸಲಿದ್ದಾರೆ
ಎಂದರು.
ವಿಶೇಷ ಉಪನ್ಯಾಸಗಳನ್ನು ಅಭಿಃ ಫೌಂಡೇಶನ್‌ದ ಸಂಸ್ಥಾಪಕ ಬಸವರಾಜ .
ಅವರು ಸಾವಯವ ಕೃಷಿ ಕುರಿತು, ಕೃಷಿ ತರಂಗ ಸಂಚಾಲಕರಾದ ಶ್ರೀ ಗಿರೀಶ ಭದ್ರಗೊಂಡ ಅವರು
ರೈತರ ನಡೆ, ವೈಜ್ಞಾನಿಕ ಸಲಕರಣೆಗಳ ಕಡೆ ಕುರಿತು, ಕೃಷಿ ವಿಶ್ವವಿದ್ಯಾಲಯ
ಉಪನ್ಯಾಸಕರಾದ ಡಾ ರಾಜೇಂದ್ರ ಪೋದ್ದಾರ ಅವರು ಮಣ್ಣು ಮತ್ತು ನೀರು ನಿರ್ವಹಣೆ ಹಾಗೂ
ಮಳೆ ನೀರು ಕೊಯ್ಲು ಕುರಿತು ಬೆಂಗಳೂರಿನ ಜಲಸಾಕ್ಷರತಾ ಫೌಂಡೇಶನ್ ಸಂಸ್ಥಾಪಕರಾದ
ಆಯ್ಯಪ್ಪ ಮಸಗಿ ಅವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯನ್ನು
ಎಸ್.ಡಿ.ದುರಗಣ್ಣವರ ಎಸ್.ಎನ್.ಪ್ಯಾಟಿಗೌಡರ ನಡೆಸಿಕೊಡಲಿದ್ದಾರೆ. ಇಲ್ಲಿಯೇ ಎರಡು
ದಿನಗಳ ಕಾಲ ಕೃಷಿ ವಸ್ತು ಪ್ರದರ್ಶನ ನಡೆಯಲಿದೆ.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಎಸ್. ಜಿದ್ದಿಯವರು ಮಾತನಾಡಿ ೨೨-೨೩ ರಂದು
ನಡೆಯುವ ಈ ಕಾರ್ಯಕ್ರಮಕ್ಕೆ ರೈತಾಪಿ ಜನ ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ
ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ. ಆರ್. ಬನಸೋಡೆ, ಕೆ. ಆರ್. ನಾಗೋಡ, ಆರ್.ಬಿ.ಜೊಲ್ಲೆ,
ಕೆ. ಬಿ. ಹುಲ್ಲೆಣ್ಣವರ, ಆರ್. ಎಸ್. ವಾಡೇದ, ಎ. ಎಂ. ಬಗಲಿ, ಪಿ. ಎಸ್. ಸಮಗಾರ, ವಿ.
ಎಸ್. ಕುಲಕರ್ಣಿ, ಕೆ. ಆರ್. ಜಾಧವ, ಡಿ.ವ್ಹಿ.ಸಾಳುಂಕೆ, ವಿ.ಎಸ್.ಶಿರೋಳ,
ಬಿ.ಟಿ.ಜಿದ್ದಿ, ಎಫ್.ಎಚ್.ಮ್ಯಾಗೋಟಿ, ಕೆ.ಎಸ್.ಯಕ್ಕಂಡಿ, ಐ.ಎನ್.ಕಂಬಾರ, ಡಾ|
ರಾಜೇಶ್ವರಿ ಜಿದ್ದಿ, ಡಿ.ವಿ.ರಾಜಗಿರಿ, ಎಮ್. ಎನ್. ಕಣಮೇಶ್ವರ, ಎಚ್.ಬಿ. ತಳವಾರ,
ಡಿ. ಕೆ. ನಾಗೋಡ ಅವರುಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ನಾಟಕ ಕಲೆ ಉಳಿಸಿ-ಬೆಳೆಸುವುದು ಅಗತ್ಯ :ಡಾ.ಪ್ರಭುಗೌಡ
    In (ರಾಜ್ಯ ) ಜಿಲ್ಲೆ
  • ಉಳುವಿ ಪಾದಯಾತ್ರಿಗಳಿಗೆ ಸ್ವಾಗತ, ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಜಮೀನು ದಾರಿ ಸಮಸ್ಯೆ ಇತ್ಯರ್ಥ ಅಧಿಕಾರ ತಹಸೀಲ್ದಾರರಿಗಿರಲಿ
    In (ರಾಜ್ಯ ) ಜಿಲ್ಲೆ
  • ಅಭ್ಯಾಸವು ಪರಿಪೂರ್ಣ ವ್ಯಕ್ತಿಯನ್ನಾಗಿ ನಿರ್ಮಿಸುತ್ತದೆ :ಡಾ.ಗುಡಿ
    In (ರಾಜ್ಯ ) ಜಿಲ್ಲೆ
  • ಪಾರಂಪರಿಕ ಕಲೆಗಳ ಸಂರಕ್ಷಣೆ ಅಗತ್ಯ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.