ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ (ಹನುಮಾನ) ದೇವರ (ಚಟ್ಟಿ) ಕಾತಿ೯ಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ನೆರವೇರಿತು.
ಕಾತಿ೯ಕೋತ್ಸವ ನಿಮಿತ್ಶ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ವಿವಿಧ ಬಣ್ಣದ ವಿದ್ಶುತ್ ಅಲಂಕಾರ,ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ೮ ಗಂಟೆಯಿಂದ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ಖಾನಾಪೂರ,ಹಿರೇ ಅಲ್ಲಾಪೂರ, ಹೊನ್ನಳ್ಳಿ, ಮಾಗಣಗೇರಾ, ಕಣಮೇಶ್ವರ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು.
ಅಚ೯ಕರಾದ ನಿಂಗಣ್ಣಾಚಾಯ೯ ಜೋಶಿ,ಸಿದ್ದಯ್ಶ ಮಠ, ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ, ಕಮೀಟಿ ಅಧ್ಶಕ್ಷ ರೇವಣಸಿದ್ದಸಾಹು ಕೋರವಾರ, ಮಲ್ಲಿಕಾಜು೯ನ ಮನಗೂಳಿ, ದೇವಿಂದ್ರ ತೊನಶ್ಶಾಳ, ಚಂದ್ರಶೇಖರ ಮನಗೂಳಿ, ಎಚ್.ಕೆ.ಸೀತನೂರ, ಬಾಲಚಂದ್ರ ಕರಿಕಲ್ಲ್, ಎಸ್.ವೈ.ಅಮರಗೋಳ, ನಡಗೇರಪ್ಪ ತಳವಾರ, ಮಲ್ಲಿಕಾಜು೯ನ ಕೊಟಾರಗಸ್ತಿ, ನಾನಾಗೌಡ ಪಾಟೀಲ, ಮಲ್ಲಪ್ಪ ಪೂಜಾರಿ, ನಾಗಣ್ಣ ಪಡೆಕನೂರ, ಕರೇಪ್ಪ ಅಮರಗೋಳ, ಶಿವಪ್ಪ ಕರಿಕಲ್ಲ್, ಡಿ.ಬಿ.ಸೀತನೂರ, ವೀರಭದ್ರ ಬಡಿಗೇರ, ಪತ್ರಕತ೯ ಮಲ್ಲು ಕೆಂಭಾವಿ, ಲಾಲಸಾ ರಾಜಾಕೋಳ, ಚಂದ್ರಶೇಖರ ಕೆಂಭಾವಿ, ಮನೋಹರ ಗುಡಿಮನಿ, ಅಂಬ್ರುತ್ ದೊಡ್ಡಮನಿ ಸೇರಿ ಬಲಭೀಮೇಶ್ವರ ದೇವರ ಭಕ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

