ಮೋರಟಗಿ: ಗ್ರಾಮದ ಆರಾಧ್ಯದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಾದ್ಯ ವೈಭವದೊಂದಿಗೆ ಬಹಳಷ್ಟು ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಪಾಲ್ಗೊಂಡಿದ್ದರು.
ಶನಿವಾರ ಭಕ್ತರು ಶ್ರೀ ವೀರಭದ್ರೇಶ್ವರ ಮೂರ್ತಿ ಪಲ್ಲಕ್ಕಿಯೊಂದಿಗೆ ಸಮೀಪದ ಭೀಮಾ ನದಿಯಲ್ಲಿ ಗಂಗಾಸ್ನಾನ ಮುಗಿಸಿಕೊಂಡು ಪಲ್ಲಕ್ಕಿ ಮೂಲ ಸ್ಥಳಕ್ಕೆ ತಲುಪಿತು ರವಿವಾರ ಬೆಳಗಿನಜಾವ ೫.೩೦ ಗಂಟೆಗೆ ಮೋರಟಗಿ ಸೇರಿದಂತೆ ವಿವಿಧ ಜಿಲ್ಲೆಯ ವೀರಭದ್ರೇಶ್ವರ ಭಕ್ತಾದಿಗಳು ಅಗ್ನಿ ಸ್ಪರ್ಶ ಮಾಡಿದರು ಅಗ್ನಿ ಸ್ಪರ್ಶದಲ್ಲಿ ಮಹಿಳೆಯರು ಕೂಡಾ ಇದ್ದರು.
*ಪುರವಂತರ ಆಗಮನ*:ಗುಲ್ಬರ್ಗ, ವಿಜಯಪುರ ಶಾಹಾಪುರ ಇಂಡಿ ಮಂದೇವಾಲ, ಜೇವರ್ಗಿ ಕಕ್ಕಳಮೆಲಿ, ಹಂಚಿನಾಳ, ನ್ಯಾವನೂರ, ಮಲಘಾಣ ಗಾಬಸಾವಳಗಿ, ಸೇರಿದಂತೆ ವಿವಿಧ ತಾಲೂಕಿನಿಂದ ಪುರವಂತರು ಆಗಮಿಸಿ ವಿಶಿಷ್ಟ ರೀತಿಯಲ್ಲಿ ಸಸ್ತ್ರ ಹಾಕಿ ಗಮನ ಸೆಳೆದರು.
*ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ:* ಬೆಳಗಿನ ಜಾವ ಅಗ್ನಿಸ್ಪರ್ಶ ಮುಗಿದ ನಂತರ ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ, ಕುದುರೆ ಕುಣಿತದೊಂದಿಗೆ ಸಂಚರಿಸಿ ಮದ್ಯಾನ್ಹ ೨ ಗಂಟೆಗೆ ಗುಡಿ ಸೇರಿತು. ನಂತರ ವಿವಿಧ ಗ್ರಾಮಗಳಿಂದ ಬಂದಂತ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದರು ೬ ಗಂಟೆಗಳ ಕಾಲ ನೂರಾರು ಮುತೈದೆಯರು ಕಳಸ ಹಿಡಿದು ಶ್ರೀ ವೀರಭದ್ರೇಶ್ವರ ಭಕ್ತಿಗೆ ಪಾತ್ರರಾದರು.
ಜಾತ್ರೆಯಲ್ಲಿ ಶಾಸಕ ಅಶೋಕ್ ಮನಗೂಳಿ ಭಾಗಿ: ಪಲ್ಲಕ್ಕಿ ಮೆರವಣಿಗೆ ಪ್ರಾರಂಭ ಆಗುತ್ತಿದ್ದಂತೆ ಆಗಮಿಸಿದ ಶಾಸಕ ಅಶೋಕ ಮನಗೂಳಿ ಕಾಲ್ನಡಿಗೆ ಮೂಲಕ ಮುಖ್ಯ ಬಜಾರ ರಸ್ತೆಯವರೆಗೆ ಆಗಮಿಸಿ ಪುರವಂತರಿಗೆ ವೈಯಕ್ತಿಕವಾಗಿ ಸಹಾಯ ಧನ ನೀಡಿದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಒದಗಿಸಿದರು.
ಶ್ರೀ ವೀರಭದ್ರೇಶ್ವರ ಸಮೀತಿಯಲ್ಲಿ ರೇವಣಸಿದ್ಧ ಮಸಳಿ, ಬಿ ಟಿ ಬೋನಾಳ, ಸಂತೋಷ ಶಾಬಾದಿ,ಡಾ, ರಾಜು ಪತ್ತಾರ, ಪ್ರಕಾಶ ನೆಲ್ಲಗಿ, ರವೀಂದ್ರ ಕುಲಕರ್ಣಿ, ಜಾತ್ರೆಯ ಉಸ್ತುವಾರಿ ವಹಿಸಿದ್ದರು.


