ವಿಜಯಪುರ: ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪ್ರಾರಂಭಗೊಂಡಾಗಿನಿಂದಲೂ ತನ್ನ ದಕ್ಷತೆಯ ಮೂಲಕ ಜನಪ್ರೀಯಗೊಳ್ಳುತ್ತಲಿದೆ. ಇದರ ಲಾಭವನ್ನು ಪಡೆದುಕೊಂಡು ಕೆಲವು ವಿರೋಧಿಗಳು ಹಾಗೂ ಸಮಾಜಘಾತುಕ ಶಕ್ತಿಗಳು ನನಗೆ ಸಿದ್ಧೇಶ್ವರ ಸಂಸ್ಥೆಯ ಅವರು ಗೊತ್ತು, ಇವರು ಗೊತ್ತು ಎಂದು ಹೇಳಿಕೊಳ್ಳುತ್ತ, ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಾರೆ ಎನ್ನುವ ಮಾಹಿತಿಯು ನಮಗೆ ಲಭ್ಯವಾಗಿದ್ದು ನಮ್ಮ ಆಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಕೆಲಸ ನೀಡುವ ಕೆಟ್ಟ ವ್ಯವಸ್ಥೆ ಇರುವುದಿಲ್ಲ. ಯಾರಲ್ಲಿ ಪ್ರತಿಭೆ ಇದೆಯೋ ಮತ್ತು ಕಾರ್ಯ ಕ್ಷಮತೆ ಇದೆಯೋ ಅಂಥಹ ಪ್ರತಿಭೆಗಳನ್ನು ಹೆಕ್ಕಿ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳುತ್ತೇವೆಯೇ ಹೊರತು ಯಾರದೇ ಒತ್ತಡಕ್ಕೆ ಮಣಿದು ಯಾರನ್ನೂ ಸಹ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಸಂಸ್ಥೆಯ ಸದಸ್ಯರು ಯಾರೂ ಸಹ ಈ ವಿಷಯದಲ್ಲಿ ತಲೆ ಹಾಕುವುದಿಲ್ಲ. ಹೀಗಾಗಿ ಜನಪ್ರೀಯತೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆಯ ಹೆಸರನ್ನು ಹಾಳು ಮಾಡುವುದಕ್ಕೆಂದು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮತ್ತೆ ಕೆಲವರು ಆಸ್ಪತ್ರೆಯ ಹೆಸರು ಹೇಳಿಕೊಂಡು ದುಡ್ಡು ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಒಂದು ವೇಳೆ ಇಂಥವರ ಮಾತಿಗೆ ಮರುಳಾಗಿ ಹಣ ನೀಡಿದಲ್ಲಿ ಆಸ್ಪತ್ರೆಯಾಗಲಿ, ಸಿದ್ಧೇಶ್ವರ ಸಂಸ್ಥೆಯಾಗಲಿ ಜವಾಬ್ದಾರಿಯಾಗುವುದಿಲ್ಲ. ಅಂಥವರು ಯಾರಾದರು ತಮಗೆ ಕಂಡು ಬಂದಲ್ಲಿ ನೇರವಾಗಿ ಆಸ್ಪತ್ರೆಗೆ ಸಂಪರ್ಕಿಸಿ ದೂರು ನೀಡಬಹುದು. ಇಂಥ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮವನ್ನು ಜರುಗಿಸಲಾಗುವುದು ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

