ದೇವರಹಿಪ್ಪರಗಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಸಂಸ್ಕೃತಿಕ ಕಾರ್ಯಕ್ರಮಗಳು ಸಂಸಾರಿಕ ಆಟಗಳು, ನಾಟಕಗಳು ಬಯಲಾಟಗಳು, ಸಂಪೂರ್ಣ ಮಾಯವಾಗುತ್ತಿವೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ತಾಲೂಕಿನ ಯಲಗೋಡ ಗ್ರಾಮದ ಶ್ರೀ ಹಜರತ್ ಲಾಡ್ಲೆ ಮಶ್ಯಾಕ ಉರಿಸ್ ಪ್ರಯುಕ್ತ ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘ ( ರಿ ) ಮೋರಟಗಿ ಇವರ ಮಗ ಹೋದರು ಮಾಂಗಲ್ಯ ಬೇಕು ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣಗಳಲ್ಲಿ ಯುವಕರು ಅನವಶ್ಯಕ ಮೊಬೈಲ್ ಬಳಸಿ ಅದರಲ್ಲಿ ಬರುವಂತಹ ದೃಶ್ಯಗಳನ್ನು ಅಳವಡಿಸಿಕೊಂಡು ಜೀವನವೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಇಂತಹ ದಿನಮಾನದಲ್ಲಿ ಗ್ರಾಮೀಣ ಭಾಗದ ಜನರು ಜಾತ್ರಾ ಪ್ರಯುಕ್ತವಾಗಿ ಸುಂದರ ನಾಟಕ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಸಂಸಾರಿಕ ನಾಟಕಗಳಲ್ಲಿ ಬರುವಂತಹ ಸನ್ನಿವೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು. ತಮ್ಮ ತಂದೆ ತಾಯಿಗಳು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯದೆ ದುಶ್ಚಟಗಳಿಂದ ದೂರವಿದ್ದು ಸುಂದರ ಜೀವನ ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ನಿಂಗಯ್ಯ ಸ್ವಾಮಿ ಸಾನಿಧ್ಯ ವಹಿಸಿದ್ದರು. ಮಗದುಮಸಾಬ್ ದಾದಾ, ಮೈಬುಬಸಾಬ ಮುಂಜಾವರ್, ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘದ ಮಾಲಿಕ ಭೀಮರಾಯ ಕಟ್ಟಿಮನಿ, ಸೇರಿದಂತೆ ಕಲಾವಿದರ ತಂಡ, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

