ದೇವರಹಿಪ್ಪರಗಿ: ರಂಭಾಪುರಿ ಪೀಠದ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಂಭಾಪುರಿಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸೋಮವಾರ ಸಾಯಂಕಾಲ ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಆರಂಭಗೊಂಡಿತು. ಮಹೋತ್ಸವದಲ್ಲಿ ಚಿಕ್ಕಮಗಳೂರ ಜಿಲ್ಲೆಯ ಅರಳಳ್ಳಿಯ ಶಿವತಾಂಡವ ನೃತ್ಯ ರೂಪಕ, ಸಾಗರದ ಮಹಿಳಾ ಡೊಳ್ಳು ಕುಣಿತ ವಿಶೇಷವಾಗಿದ್ದು, ೨೫೧ ಕುಂಭ, ಕಳಶ ಹೊತ್ತ ಮಹಿಳೆಯರು ಮಹೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡು ತಮ್ಮ ಭಾವ ಮೆರೆದರು.
ಮೆರವಣಿಗೆ ಇಂಡಿ ರಸ್ತೆಯಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತ, ಮೋಹರೆ ಹಣಮಂತ್ರಾಯ ವೃತ್ತ, ಮೇನ್ ಬಜಾರ ಮಾರ್ಗವಾಗಿ ಶ್ರೀವೀರಭದ್ರೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಸಮಸ್ತ ಭಕ್ತವೃಂದ “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ವಂದೇ ರೇಣುಕಂ” ಎಂಬ ಉದ್ಘೋಶಗಳೊಂದಿಗೆ ಕಳೆ ತಂದರು.
ಎಮ್ಮಿಗನೂರಿನ ವಾಮದೇವಶ್ರೀ ,ಸಗರದ ವೀರಮಹಾಂತಶ್ರೀಗಳು, ಸದಯ್ಯನಮಠದ ವೀರಗಂಗಾಧರಶ್ರೀಗಳು, ಜಡಿಮಠದ ಜಡೇಸಿದ್ದೇಶ್ವರ ಶ್ರೀಗಳು, ಕೊಕಟನೂರಿನ ಶ್ರೀಗಳು ಸಹಿತ ವಿವಿಧ ಮಠಾಧೀಶರು, ಜಾತ್ರಾ ಸಮೀತಿಯ ಸಿ.ಕೆ.ಕುದರಿ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಬಾಳಯ್ಯ ಇಂಡಿಮಠ, ಯಲಗೂರೇಶ ದೇವೂರ, ಕಾಸು ಜಲಕತ್ತಿ, ಶಾಂತಯ್ಯ ಜಡಿಮಠ, ಬಂಡೆಪ್ಪಗೌಡ ದಿಂಡವಾರ, ಸಿದ್ದು ಆನಂದಿ, ಸೋಮಶೇಖರ ಹಿರೇಮಠ, ಆನಂದ ಜಡಿಮಠ, ವೀರಣ್ಣ ಮಣೂರ, ಪಿ.ಎಸ್.ಮಿಂಚನಾಳ, ಬಿ.ಕೆ.ಪಾಟೀಲ, ಶ್ರೀಕಾಂತ ನಾಶಿಮಠ, ಶಿವಾನಂದ ವಸ್ತ್ರದ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

