ವಿಜಯಪುರ: ನಾಗರಾಳೆ ಶಿಕ್ಷಣ ಸಂಸ್ಥೆ, ವಿಜಯಪುರ ವತಿಯಿಂದ ದೀಪಾವಳಿ ವಿಶೇಷ ಹಾಗೂ ಚಳುವಳಿಗಾಲದ ಸಮಯದಲ್ಲಿ ಉಪಯುಕ್ತ ಆಗುವಂತೆ ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿರುವ ಅನಾಥಾಶ್ರಮದಲ್ಲಿ ಎಲ್ಲ ಮಕ್ಕಳಿಗೂ ನಾಗರಾಳೆ ಶಿಕ್ಷಣ ಸಂಸ್ಥೆ, ಮತ್ತು ಸಿಹಿಯನ್ನು ಹಂಚಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಸಿದರಾಯ ಬಿ. ನಾಗರಾಳೆ ಇವರು ಮಾತನಾಡಿ, ನಮ್ಮ ಸಂಸ್ಥೆಯಿಂದ ಇಲ್ಲಿ ವಾಸವಾಗಿರುವ ಅನಾಥ ಮಕ್ಕಳಿಗೆ ಸ್ವೆಟರ್ ನೀಡಿದ್ದು ಅತೀವ ಸಂತಸವನ್ನುಂಟು ಮಾಡಿದೆ. ಈ ಎಲ್ಲ ಮಕ್ಕಳಿಗೆ ದೇವರು ಆರೋಗ್ಯವನ್ನು ನೀಡಲಿ, ದೀಪಾವಳಿಯು ಇವರ ಬಾಳಲ್ಲಿ ಹೊಸ ಹುಮ್ಮಸ್ಸನ್ನು ತರಲೆಂದು ಶುಭ ಹಾರೈಸಿದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಕಾರ್ಮಿಕರ ಮತ್ತು ಬಡ ರೋಗಿಗಳ ಕಲ್ಯಾಣ ಪರಿಷತ್ (ಎನ್.ಜಿ.ಓ) ಅಧ್ಯಕ್ಷ ಅಶೋಕ ಜುಗತಿ ಮಾತನಾಡಿ, ಇಲ್ಲಿ ಆಶ್ರಯ ಪಡೆದಿರುವ ಎಲ್ಲ ಮಕ್ಕಳು ಅನಾಥ ಮಕ್ಕಳಲ್ಲ, ಇವರು ದೇಶದ ಆಸ್ತಿಗಳಾಗಿದ್ದಾರೆ. ಇಂತಹ ಅನಾಥ ಮಕ್ಕಳಿಗೆ ಸರಕಾರವು ಇವರ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಲೆಂದು ಕೋರಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಭೀಮರಾವ ದೇಸಾಯಿ, ಯಲ್ಲುಬಾಯಿ ಚವ್ಹಾಣ, ಮಂಜುನಾಥ ಚಲವಾದಿ, ಪ್ರೀಯಾಂಕಾ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.
Related Posts
Add A Comment