ದೇವರಹಿಪ್ಪರಗಿ: ಪಟ್ಟಣ ಪಂಚಾಯತಿಗೆ ಮೂವರು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರಕಾರ ಆದೇಶ ಮಾಡಿದೆ.
ಪೌರಸಭೆಗಳ ಅಧಿನಿಯಮದಂತೆ ಯುವ ಮುಖಂಡ ಶ್ಯಾಮಣ್ಣ ಅಡಿವೆಪ್ಪ ಮೆಟಗಾರ, ಸುನೀಲ ಸುರೇಶ ಕನಮಡಿ ಹಾಗೂ ಹುಸೇನಬಾಷಾ ರಾಜೇಸಾಬ ಕೊಕಟನೂರ ಇವರನ್ನು ಪಟ್ಟಣ ಪಂಚಾಯಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಗೌರವಾನ್ವಿತ ರಾಜ್ಯಪಾಲರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ತಿಳಿಸಿದ್ದಾರೆ.
Related Posts
Add A Comment