ವಿಜಯಪುರದಲ್ಲಿ ಟಿಪ್ಪುಸುಲ್ತಾನ ಜಯಂತೋತ್ಸವ | ಸನ್ಮಾನ | ಧ್ವಜಾರೋಹಣ
ವಿಜಯಪುರ: ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿ ಟಿ.ಎಸ್.ಎಸ್. ಸಂಘನೆಯ ವತಿಯಿಂದ ಶುಕ್ರವಾರ ಮೈಸೂರು ಹುಲಿ ಟಿಪ್ಪು ಸುಲ್ತಾನ ಅವರ ಜಯಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಸರ್ವಧರ್ಮಿಯರು ಒಗ್ಗೂಡಿ ಪುಷ್ಪಾರ್ಚನೆ ಸಲ್ಲಿಸಿ ಟಿಪ್ಪು ಧ್ವಜಾರೋಹಣ ನೆರವೇರಿಸಿ ಜೈಕಾರ ಹಾಕಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ.ಪಿ.ಸಿ.ಸಿ. ಸದಸ್ಯ ಹಮೀದ್ ಮುಶ್ರೀಫ್ ಮಾತನಾಡಿ, ತಮ್ಮ ಉದರದಿಂದ ಹುಟ್ಟಿದ ಮಕ್ಕಳನ್ನೆ ಒತ್ತಿ ಇಟ್ಟು ದೇಶದ ರಕ್ಷಣೆ ಮಾಡಿದ ಟಿಪ್ಪು ಸುಲ್ತಾನ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಆದರೆ ದೇಶದ್ರೋಹಿಗಳು ಟಿಪ್ಪು ಕುರಿತು ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಟಿಪ್ಪು ಹಿಂದು ಮಂದಿರಗಳ ರಕ್ಷಣೆಗೆ ಶ್ರಮಿಸಿದ್ದಾರೆ. ಇಂಥಹ ಮಹಾನ್ ಪುರುಷರು ಸರ್ವ ಧರ್ಮದವರಿಗೂ ಆದರ್ಶ ಎಂದರು.
ಅಧ್ಯಕ್ಷತೆವಹಿಸಿದ ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಟಿಪ್ಪು ಜಯಂತಿ ಅರ್ಥಪೂರ್ಣ ಆಚರಣೆ ಮಾಡಿದ್ದಕ್ಕಾಗಿ ಸಂತೋಷವಾಗಿದೆ. ಟಿಪ್ಪು ಒಬ್ಬ ಮಹಾನ್ ದೊರೆ. ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ಪುರುಷನ ವಿಚಾರಧಾರೆಗಳನ್ನು ಸರ್ವರು ಅಳವಡಿಸಿಕೊಳ್ಳಬೇಕು ಎಂದರು.
ಕಾಂಗ್ರೇಸ್ ಮುಖಂಡ ವೈಜನಾಥ ಕರ್ಪೂರಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ರಫಿ ಭಂಡಾರಿ ಅವರನ್ನು ಟಿ.ಎಸ್.ಎಸ್. ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಪ್ರತಿಯಾಗಿ ಪತ್ರಕರ್ತ ರಫಿ ಭಂಡಾರಿ ಮಾತನಾಡಿ, ದೇಶದ ರಕ್ಷಣೆಗಾಗಿ ಶ್ರಮಿಸಿದ ಟಿಪ್ಪು ಸುಲ್ತಾನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಟಿಎಸ್‌ಎಸ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಡಿಎಸ್.ಎಸ್. ಮುಖಂಡ ಶ್ರೀನಾಥ ಪೂಜಾರಿ, ಪ್ರಗತಿ ಪರ ಸಂಘಟನೆಯ ಅಪ್ಪಾಸಾಹೇಬ ಯರನಾಳ, ಅಕ್ರಂ ಮಾಶ್ಯಾಳಕರ್ ಮಾತನಾಡಿದರು.
ಟಿ.ಎಸ್. ಎಸ್. ಜಿಲ್ಲಾಧ್ಯಕ್ಷ ಇರಫಾನ ಶೇಖ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ, ಪಾಲಿಕೆ ಸದಸ್ಯ ಅಪ್ಪು ಪೂಜಾರಿ, ಸದ್ದಾಂ ನಾಡೆವಾಲೆ, ವಸಂತ ಹೊನಮೊಡೆ, ಬೀರಪ್ಪಾ ಜುಮನಾಳ, ಡಾ. ಬಸೀರ್ ಅಹಮ್ಮದ್, ಮಹಾದೇವ ರಾವಜಿ, ಲಕ್ಷ್ಮಣ ಹಂದ್ರಾಳ, ಅಸ್ಪಾಕ್ ಮನಗೂಳಿ, ಚಂದ್ರಗಿರಿ ಹೊನ್ನದ, ಶರಣಪ್ಪ ಯಕ್ಕುಂಡಿ, ದಸಗಿರ ಸಾಲುಟಗಿ, ಡಾ. ರಫಿಕ್ ಗುರಿಕಾರ, ಹಾಜಿ ನದಾಫ್, ಇಲಿಯಾಸ ಬಗಲಿ, ರೌಫ್ ಮೌಲಾನಾ, ಆಸಿಫ್ ಹೆರಕಲ್, ಮುನ್ನಾ ಮುಲ್ಲಾ, ಅಲ್ತಾಫ್ ಲಕ್ಕುಂಡಿ, ಮಹಮ್ಮದ್‌ರಫಿಕ್ ಹೆಬ್ಬಾಳ, ಅಫ್ಜಲ್ ಜಾನವೇಕರ್, ಹನ್ನಾನ ಶೇಖ, ಏಜಾಜ್ ಕಲಾದಗಿ, ನಜೀರ್ ತಾಳಿಕೋಟಿ, ಮಕ್ಬೂಲ್ ಮುಲ್ಲಾ, ಶಮಶರ್‌ಅಲಿ ಮುಲ್ಲಾ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.