ಸಿಂದಗಿ: ಮಕ್ಕಳ ವಿಶೇಷ ಗ್ರಾಮ ಸಭೆ ಮಾಡುವುದರ ಉದ್ದೇಶ, ಮಕ್ಕಳ ಕುಂದುಕೊರತೆಗಳ ಕುರಿತು ಸ್ಥಳೀಯ ಸರ್ಕಾರದ ಮುಂದಿಡುವುದು ಎಂದು ಸಂಗಮ ಸಂಸ್ಥೆ ನಿರ್ದೇಶಕ ಫಾದರ್ ಸಂತೋಷ ಹೇಳಿದರು.
ತಾಲೂಕಿನ ಬಂದಾಳ ಶಾಲೆಯ ಆವರಣದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಬಂದಾಳ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸರ್ಕಾರವೆಂದರೆ ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮ ಸಭೆಯಲ್ಲಿದ್ದಾರೆ. ಮಕ್ಕಳು ತಮ್ಮ ಕುಂದುಕೊರತೆಗಳನ್ನು ಅವರಿಗೆ ಧೈರ್ಯವಾಗಿ ಹೇಳಬೇಕು ಎಂದರು.
ಬಂದಾಳ ಪಂಚಾಯತ್ ಅಧೀನದಲ್ಲಿ ಬರುವ ಶಾಲೆಯ ಮಕ್ಕಳ ಬೇಡಿಕೆಗಳು: ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಬಂದಾಳ ಶಾಲಾ ಮಕ್ಕಳ ಬೇಡಿಕೆಗಳು- ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಅಡುಗೆಕೊಣೆ ಹೈಸ್ಕೂಲ್ ಕಟ್ಟಡ, ಆಟದ ಮೈದಾನ, ಕಂಪೌಂಡ್, ಶಾಲಾ ಜಾಗಕ್ಕೆ ಉತಾರಿ, ಮತ್ತು ಗ್ರಂಥಲಾಯ ವ್ಯವಸ್ಥೆ ಮಾಡಬೇಕು.
ಓತಿಹಾಳ ಶಾಲೆಯ ಮಕ್ಕಳ ಬೇಡಿಕೆಗಳು: ಗ್ರಂಥಾಲಯ, ಪ್ರಾಜೆಕ್ಟರ್, ಸಿ.ಸಿ.ಟಿ.ವಿ, ಆಟೋಟ ಸಾಮಾಗ್ರಿಗಳು, ಗಣಕಯಂತ್ರ ಮತ್ತು ಕಂಪೌಂಡ್ ಮಾಡಬೇಕು.
ಚಿಕ್ಕಸಿಂದಗಿ ಶಾಲೆಯ ಮಕ್ಕಳ ಬೇಡಿಕೆಗಳು: ಕಂಪೌಂಡ್, ಅಡುಗೆಕೂಣೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಮೆಲ್ಛಾವಣಿ ದುರಸ್ತಿ, ಶೌಚಾಲಯ, ರೇಷನ್ ಕಳ್ಳರನ್ನು ಕಂಡು ಹಿಡಿಯುವುದು ಮತ್ತು ಸಿ.ಸಿ.ಟಿವಿ ಅಳವಡಿಸಬೇಕು.
ಬೂದಿಹಾಳ ಶಾಲೆಯ ಮಕ್ಕಳ ಬೇಡಿಕೆಗಳು: ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕಟ್ಟಡ ಮೇಲ್ಚಾವಣಿ ವ್ಯವಸ್ಥೆ, ಸಾರ್ವಜನಿಕರು ಶಾಲೆ ಕಂಪೌಂಡ್ ಒಳಗೆ ಬಂದು ಮದ್ಯಪಾನ ಮಾಡುತ್ತಾರೆ ಇದನ್ನು ತಡೆಯಬೇಕು ಮತ್ತು ಶೌಚಾಲಯ, ಈ ವ್ಯವಸ್ಥೆಗಳನ್ನು ಅತೀ ಶೀಘ್ರದಲ್ಲಿ ನೇರವೇರಿಸಲು ಮಕ್ಕಳು ತಮ್ಮ ಬೇಡಿಕೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುಂದಿಟ್ಟರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪಿಡಿಒ ಬಿ.ಎನ್.ಶಹಾಪೂರ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಆರ್.ಎನ್. ಮುಜಾವರ್, ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಸುವರ್ಣ ಮಕಣಪೂರ, ಉಪಾಧ್ಯಕ್ಷ ಜೆಟ್ಟೆಪ್ಪ ಉಕ್ಕಲಿ, ಮುಖ್ಯಗುರು ನಿಂಗನಗೌಡ ಪಾಟೀಲ, ಎಮ್.ಕೆ. ಬಿರಾದಾರ, ಚಂದ್ರಶೇಖರ್ ಬುಂಯಾರ್, ಬಸವರಾಜ ಅಗಸರ, ರಾಜೀವ ಕುರಿಮನಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಸಂಗಮ ಸಂಸ್ಥೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿದ್ದರು.
Related Posts
Add A Comment