ವಿಜಯಪುರ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 2022-23 ನೇ ಸಾಲಿನ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯಿಂದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ ಆಡಲು ಓಡಿಸ್ಸಾ ರಾಜ್ಯದ ಭುವನೇಶ್ವರ ನಗರಕ್ಕೆ ತೆರಳುತ್ತಿರುವ ಜಿಲ್ಲಾ ನೌಕರರ ಸಂಘದ ಖಜಾಂಚಿ ಸೈಯದ್ ಜುಬೇರ ಕೆರೂರ ಅವರಿಗೆ ಶುಕ್ರವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ತಮ್ಮ ಕಛೇರಿಯಲ್ಲಿ ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ತಳವಾರ ಹಾಕಿ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಜುಬೇರ ಕೇರೂರ ಅವರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದು ಓಡಿಸ್ಸಾದ ಭುವನೇಶ್ವರದಲ್ಲಿ ನಡೆಯುವ ಪಂದ್ಯಾವಳಿಯಲ್ಲಿಯೂ ಸಹ ತಂಡವನ್ನು ಜಯಶಾಲಿಯಾಗಿಸಿ ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಎಂ.ಪಡಶೆಟ್ಟಿ, ಎ.ಎಪ್.ಅರಳಿಮಟ್ಟಿ, ಡಿ.ಕೆ.ತವಸೆ, ಬಸೀರ್ ನದಾಪ್ ಇದ್ದರು.
Related Posts
Add A Comment