ವಿಜಯಪುರ: ಅಂದಾಜು ೪೦ ವಯಸ್ಸಿನ ಸೀತಾ ಅಶೋಕ ದರ್ಗಾ ಎಂಬ ಮಹಿಳೆ ಕಾಣೆಯಾಗಿರುವ ಕುರಿತು ವಿಜಯಪುರ ಗೋಲಗುಂಬಜ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಪತ್ತೆಗಾಗಿ ಸಾರ್ವಜನಿಕರಲ್ಲಿ ಪೊಲೀಸ್ ಠಾಣೆ ಪಿಎಸ್.ಐ. ಅವರು ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ಮಹಿಳೆ ೪.೬ ಅಡಿ ಎತ್ತರ, ತಲೆಯಲ್ಲಿ ಕಪ್ಪು ಕೂದಲು, ಸಾಧಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ನೆಟ್ಟನೆಯ ಮೂಗು, ಕೆಂಪು ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡತ್ತಿದ್ದು, ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಗೋಲ್ ಗುಂಬಜ್ ಪೊಲೀಸ್ ಠಾಣೆ, ಪಿ.ಎಸ್. ದೂರವಾಣಿ ಸಂಖ್ಯೆ : ೦೮೩೫೨-೨೫೦೨೧೪, ಎಸ್.ಡಿ.ಪಿ.ಓ- ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨, ೦೮೩೧-೨೪೦೫೨೦೧ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Related Posts
Add A Comment