ವಿಜಯಪುರ: ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸ್ವಸಹಾಯ ಸಂಘಗಳ ಮಹಿಳೆಯರು ತಮ್ಮ ಪರಿಶ್ರಮ ಹಾಗೂ ಸೃಜನಶೀಲತೆ ಮೂಲಕ ಸಿದ್ಧಪಡಿಸಿದ ಹಲ ವಿನ್ಯಾಸದ ಮಣ್ಣಿನ ದೀಪಗಳಿಗೆ ಮಾರುಕಟ್ಟೆ ಒದಗಿಸುವದಕ್ಕೆ ಹಾಗೂ ಸ್ವದೇಶೀ ಉತ್ಪನ್ನಗಳ ಖರೀದಿಸುವ ಮೂಲಕ
ಮಹಿಳಾ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಬೆಂಬಲಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿಬಿ ದೇವರಮನಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲಾ ಪಂಚಾಯತಿ ಕಾರ್ಯಲಯದ ಸಮೀಪದಲ್ಲಿ ಎರಡು ದಿನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ “ದೀಪ ಸಂಜೀವಿನಿ” ಇತ್ತಿಚಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಆರ್ಥಿಕ ಬಲವರ್ಧನೆಗೆ ಸಹಕಾರ ನೀಡುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ.
ವಿಜಯಪುರ ನಗರ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಮೇಳಕ್ಕೆ ಆಗಮಿಸಿ, ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸಹಕಾರ ನೀಡಬೇಕು ಸ್ವಸಹಾಯ ಸಂಘದ ಮಹಿಳೆಯರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿದ್ದು, ಹೀಗಾಗಿ ಜಿಲ್ಲಾ ಕೇಂದ್ರವಲ್ಲದೆ ತಾಲೂಕು ಕೇಂದ್ರಗಳಲ್ಲೂ ಕೂಡ ದೀಪ ಸಂಜೀವಿನಿ ಪ್ರಯುಕ್ತ ಮಳಿಗೆ ಹಾಕುವುದರ ಮೂಲಕ ಸ್ತ್ರೀ ಶಕ್ತಿಯ ಕೈ ಬಲಪಡಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನರ್ಬಾಡ ಸಂಸ್ಥೆಯ ವಿಕಾಸ ರಾಠೋಡ, ಜಿಲ್ಲಾ ಮತ್ತು ತಾಲೂಕು ಎನ್‌ಆರ್‌ಎಲ್‌ಎಂ ಸಿಬ್ಬಂದಿ, ವಿವಿಧ ತಾಲೂಕಿನ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
Related Posts
Add A Comment