ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬೀರಲಿಂಗೇಶ್ವರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂದೆ ಹಾಯ್ದು ಹೋಗುವ ಮುಖ್ಯ ರಸ್ತೆಯು ತುಂಬಾ ಹದಗೆಟ್ಟು ಹೋಗಿರುವದರಿಂದಾಗಿ ಮಳೆ ನೀರು ನಿಂತು ಕೊಳಚೆ ಗುಂಡಿ ನಿರ್ಮಾಣ ಗೊಂಡಿದೆ. ಇದರಿಂದಾಗಿ ನಿತ್ಯ ಶಾಲೆಗೆ ವಿದ್ಯಾರ್ಥಿಗಳು ಈ ರಸ್ತೆ ಮೂಲಕವಾಗಿಯೇ ಹೋಗುವ ದುಸ್ಥಿತಿಯಿದೆ. ರಸ್ತೆ ಸಂಪೂರ್ಣ ಹದಗೆಟ್ಟಿರುವದರಿಂದಾಗಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ನೀರು ನಿಂತಿದೆ. ಒಂದು ವೇಳೆ ವಿದ್ಯಾರ್ಥಿಗಳು ಹಾಯತಪ್ಪಿ ಗುಂಡಿಯೊಳಗೆ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ. ಈ ರಸ್ತೆ ಹಲವಾರು ತಿಂಗಳುಗಳಿಂದ ಹದಗೆಟ್ಟು ಹೋಗಿದ್ದರೂ ಸಂಬಂಧಿಸಿದ ಇಲಾಖೆಯು ಗಮನಹರಿಸುತ್ತಿಲ್ಲ. ಮುಂದೆ ಅಪಘಾತಗಳಾಗುವ ಮುನ್ನವೇ ಇಲಾಖೆಯು ಎಚ್ಚೆತ್ತುಕೊಂಡು ರಸ್ತೆ ರಿಪೇರಿ ಮಾಡಿ ಡಾಂಬರೀಕರಣ ಮಾಡುವ ಮೂಲಕ ಶಾಲಾ ಮಕ್ಕಳಿಗೆ, ವಾಹನ ಸವಾರರು ಸುಗಮವಾಗಿ ಸಂಚರಿಸುವಂತೆ ಮಾಡಬೇಕೆಂದು ರೈತ ಮುಖಂಡ ಅರವಿಂದ ಕುಲಕರ್ಣಿ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
Related Posts
Add A Comment