ವಿಜಯಪುರ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ ನವೆಂಬರ್ 13 ರಂದು ಸೋಮವಾರದಿಂದ ನವೆಂಬರ 18 ಶನಿವಾರದ ವರೆಗೆ ಒಂದು ವಾರ ಉಚಿತ ಮಧುಮೇಹ ಪಾದ ರೋಗದ (ಡಯಾಬಿಟಿಕ್ ಫುಟ್) ತಪಾಸಣೆ ಮತ್ತು ಚಿಕಿತ್ಸಾ ಸಪ್ತಾಹ ಶಿಬಿರ ಸಪ್ತಾಹ ನಡೆಯಲಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶಸ್ತ್ರಚಿಕಿತ್ಸ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ, ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಕೋಣೆ ಸಂಖ್ಯೆ 4ರಲ್ಲಿ ಈ ಶಿಬಿರ ನಡೆಯಲಿದೆ. ಆಸಕ್ತ ಮಧುಮೇಹಿಗಳು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಒಂದು ವಾರ ನಡೆಯಲಿರುವ ಈ ಶಿಬಿರದಲ್ಲಿ ಮಧುಮೇಹ ಪಾದರೋಗ ತಪ್ಪಿಸಲು ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣ ನೀಡಲಾಗುವುದು. ಜೊತೆಗೆ ಅಗತ್ಯವಿರುವ ಮಧುಮೇಹಿಗಳಿಗೆ ಪಾದದ ವಿಶೇಷ ಪರೀಕ್ಷೆಗಳಾದ ಕಂಪನ ಜ್ಞಾನ(ಬಯೋಥಿಸಿಯೋ ಮೀಟರ್), ಸ್ಪರ್ಶ ಜ್ಞಾನ( ಮೋನೊಫಿಲಾಮೆಂಟ್), ಪಾದದಲ್ಲಿಯ ಒತ್ತಡ( ಹ್ಯಾರಿಸ್ ಮ್ಯಾಟ್), ರಕ್ತ ಸಂಚಾರ( ಹ್ಯಾಂಡ್ ಹೆಲ್ಡ್ ಡಾಪ್ಲರ್) ಪರೀಕ್ಷೆಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9481840452 ಸಂಪರ್ಕಿಸಬಹುದಾಗಿದೆ.
Related Posts
Add A Comment