ಮುದ್ದೇಬಿಹಾಳ: ಬಸವನ ಬಾಗೇವಾಡಿ ಅಥವಾ ಮುದ್ದೇಬಿಹಾಳ ತಾಲೂಕುಗಳ ಪೈಕಿ ಯಾವುದಾದರೂ ಒಂದನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ತಾಲೂಕುಗಳು ಶೈಕ್ಷಣಿಕ ಮತ್ತು ಭೌಗೋಳಿಕ ವಾಗಿ ಸಾಕಷ್ಟು ವಿಶಾಲವಾಗಿವೆ. ಮುದ್ದೇಬಿಹಾಳ ತಾಲೂಕು ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಬಸವನ ಬಾಗೇವಾಡಿ ಕೂಡಾ ಯಾವುದರಲ್ಲಿಯೂ ಕಮ್ಮಿ ಇಲ್ಲ ಅನ್ನಿಸಿಕೊಂಡಿದೆ. ಈ ಎರಡೂ ತಾಲೂಕುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗುರ್ತಿಸಿಕೊಂಡಿವೆ. ಎರಡೂ ಕೇಂದ್ರಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳಿವೆ.
ಮುಖ್ಯವಾಗಿ ಈ ಭಾಗದ ಜನ ವಿವಿಧ ಕಾರ್ಯಗಳಿಗೆ ಜಿಲ್ಲೆಗೆ ತೆರಳಬೇಕಾದರೆ ಸಧ್ಯ ೮೦ ಕಿ.ಮೀ ದೂರ ಕ್ರಮಿಸಬೇಕು. ದಿನಂಪ್ರತಿ ಈ ಭಾಗದ ಜನ ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ ಅಂದಾಜು ೩ ತಾಸು ಪ್ರಯಾಣ ಬೆಳೆಸಬೇಕು. ಹೋಗಲು ೩ ತಾಸು ಬರಲು ೩ ಹೀಗೆ ಇಡೀ ದಿನ ಬರೀ ಪ್ರಯಾಣಕ್ಕೆ ಕಾಲಹರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸುತ್ತಮುತ್ತ ದೊಡ್ಡ ಪಟ್ಟಣಗಳನ್ನು, ಕೈಗಾರಿಕಾ ಪ್ರದೇಶಗಳನ್ನು ಸೇರಿದಂತೆ ಎಲ್ಲ ತರಹದ ಸೌಲಭ್ಯಗಳನ್ನು ಈ ಎರಡೂ ತಾಲೂಕುಗಳು ಒಳಗೊಂಡಿದ್ದು ಬಹುದಿನಗಳಿಂದಲೂ ಈ ಭಾಗದ ಜನರ ಬಹುಮುಖ್ಯ ಜಿಲ್ಲಾ ಬೇಡಿಕೆಯಾಗಿರುವ ಮುದ್ದೇಬಿಹಾಳ ಅಥವಾ ಹತ್ತಿರದ ೪೦ ಕಿ.ಮೀ ವ್ಯಾಪ್ತಿಯ ಬಸವನ ಬಾಗೇವಾಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದಲ್ಲಿ ಸಾಕಷ್ಟು ಅನುಕೂಲಗಳಾಗಲಿವೆ ಎಂದರು.
ಬ.ಬಾಗೇವಾಡಿ ಅಥವಾ ಮುದ್ದೇಬಿಹಾಳ ಜಿಲ್ಲಾ ಕೇಂದ್ರವಾಗಿಸಲು ಆಗ್ರಹ
Related Posts
Add A Comment