ವಿಜಯಪುರ: ಮರಾಠಾ ಲೈಟ್ ಇನ್‌ಫೆಂಟ್ರಿ ಸೆಂಟರ್ ಬೆಳಗಾವಿಯ ಶಿವಾಜಿ ಸ್ಟೇಡಿಯಂನಲ್ಲಿ ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಮಾಜಿ ಸೈನಿಕರ ವಿಧವಾ ಪತ್ನಿಯರಿಗಾಗಿ ನವೆಂಬರ್ ೨೬ ರಂದು ಬೆಳಿಗ್ಗೆ ೮ -೩೦ರಿಂದ ಸಂಜೆ ೪ ಗಂಟೆವರೆಗೆ ಮಾಜಿ ಸೈನಿಕರ ರ‍್ಯಾಲಿ ಆಯೋಜಿಸಲಾಗಿದೆ.
ಈ ರ‍್ಯಾಲಿಯಲ್ಲಿ ವಿವಿಧ ಅಭಿಲೇಖ ಕಾರ್ಯಾಲಯಗಳಿಮದ ಸಿಬ್ಬಂದಿಗಳು, ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಪಿಂಚಣಿ, ಕುಟುಂಬ ಪಿಂಚಣಿಗೆ ಸಂಬಂಧಿಸಿದ ಅಭಿಲೇಖ ಕಾರ್ಯಾಲಯಕ್ಕೆ ಹಾಗೂ ಪಿಂಚಣಿ ಬಟವಡೆ ಬ್ಯಾಂಕಿಗೆ ಸಂಬಂಧಿಸಿದ ಹಾಗೂ ಇತರೆ ಹಲವಾರು ಕುಂದು ಕೊರತೆ ನಿವಾರಿಸುವ ಪ್ರಕ್ರಿಯೆ ನಡೆಯಲಿದೆ. ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿಜಯಪುರ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment