ವಿಜಯಪುರ: ವಿಜಯಪುರ ಜಿಲ್ಲೆಯ ಸೈನಿಕ್ ಮಂಡಳಿಯನ್ನು ಪುನರ್ ರಚಿಸಲಾಗುತ್ತಿದ್ದು, ಮಂಡಳಿಗೆ ನೇಮಕಾತಿ ಬಯಸುವ ಮಾಜಿ ಸೈನಿಕರು ಹಾಗೂ ಸೇನೆ ನಿವೃತ್ತ ಅಧಿಕಾರಿಗಳು ತಮ್ಮ ಸೇವೆಯ ಸಂಕ್ಷಿಪ್ತ ಹಿನ್ನಲೆ ಮತ್ತು ಪೂರ್ವ ಚರಿತ್ರೆಯನ್ನು ನವೆಂಬರ್ ೧೭ ರೊಳಗೆ ಸೈನಿಕ್ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ಕಚೇರಿಗೆ ಸಲ್ಲಿಸುವಂತೆ ಕೋರಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೦೯೧೩ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.