ಹೂವಿನಹಿಪ್ಪರಗಿ: ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಾರದ ಕಾರಣ ಬೆಳೆಗಳು ಒಣಗಿಹೋಗಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು ಹೂವಿನಹಿಪ್ಪರಗಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳವಾರ ನಡೆದ ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೆರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಗೆ ಜಿಲ್ಲೆಯ ೮ ಶಾಸಕರ ಪೈಕಿ ನಾಲ್ಕು ಜನ ಶಾಸಕರು ಮಾತ್ರ ಭಾಗವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಬಸವನಬಾಗೇವಾಡಿ ಶಾಸಕರು ಹಾಗೂ ಜವಳಿ ಕಬ್ಬು ಅಭಿವೃದ್ಧಿ ಸಚಿವರು, ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲರು ನೀರಾವರಿ ಸಲಹಾ ಸಮಿತಿ ಸಭೆಗೆ ಗೈರಾಗಿದ್ದು ತಮಗೆ ಶೋಭೆ ತರುವಂತದಲ್ಲ, ಇದನ್ನು ರೈತ ಸಂಘ ಖಂಡಿಸುತ್ತದೆ. ಆಯ್.ಸಿ.ಸಿ ಸಭೆ ಮಹತ್ವದ ಸಭೆಯಾಗಿರುವುದರಿಂದ ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಜರಿರಬೇಕು. ರೈತರ ಬೇಡಿಕೆಯಂತೆ ಅವರಿಗೆ ಅನಕೂಲವಾಗುವ ರೀತಿ ನಿರ್ಣಯ ಕೈಗೊಳ್ಳದಿದ್ದರೆ ಅದನ್ನು ಪ್ರಶ್ನಿಸಲು ಕಡ್ಡಾಯವಾಗಿ ಜಿಲ್ಲೆಯ ಸಚಿವರು ಶಾಸಕರು ಉಪಸ್ಥಿತರಿರಬೇಕು. ಒಂದು ವೇಳೆ ಗೈರಾದಲ್ಲಿ ಅವರು ಮಾಡಿದ್ದೇ ಮಾರ್ಗವಾಗುತ್ತದೆ ಎಂದರು. ರಾಯಚೂರ, ಗುಲಬುರ್ಗಾ, ಯಾದಗಿರ ಜಿಲ್ಲೆ ಸೇರಿದಂತೆ ಇನ್ನುಳಿದ ಜಿಲ್ಲೆಗಳ ಜನಪ್ರತಿನಿಧಿಗಳು ಕಡ್ಡಾಯವಾಗಿ ಆ ಭಾಗದ ರೈತರೊಂದಿಗೆ ಸಭೆಗೆ ಹಾಜರಾಗಿ ತಮ್ಮ ಭಾಗದ ರೈತರಿಗೆ ನ್ಯಾಯ ದೊರಕಿಸಿ ಕೊಡುತ್ತಾರೆ ಆದರೆ ನಮ್ಮ ಜಿಲ್ಲೆಯ ಯಾವೊಬ್ಬ ಶಾಸಕರು ಕೂಡ ಧ್ವನಿ ಎತ್ತುವದಿಲ್ಲ ಇದರಿಂದ ನಮ್ಮ ಜಿಲ್ಲೆಯ ರೈತರಿಗೆ ವಂಚನೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹಣಮಂತರಾಯ ಗುಣಕಿ, ಮೋಹನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಪಿ ಜಿ ಗೋಟೇದ, ಬಸವರಾಜಗೌಡ ಪಾಟೀಲ, ವಿಠ್ಠಲ ಬಿರಾದಾರ, ಬಸವನಗೌಡ ಬಿರಾದಾರ, ಸಂಗನಗೌಡ ಬಿರಾದಾರ, ನಾಗಪ್ಪ ಅಳಗುಂಡಗಿ, ಕುಮಾರಗೌಡ ಪಾಟೀಲ, ಹಣಮಂತ ಸಾಸನೂರ, ರಾಜು ಕುಂಟೋಜಿ, ರಮೇಶ ಕೋರಿ ಇದ್ದರು.
Related Posts
Add A Comment