ಇಂಡಿ : ಮುಂಗಾರು, ಹಿಂಗಾರು ಎರಡೂ ಮಳೆ ಬಾರದೆ ಇರುವುದರಿಂದ ಸರಕಾರ ಬರಗಾಲ ಘೋಷಿಸಿದೆ. ಆದರೆ ಇದು ಬರೀ ಬರಗಾಲವಲ್ಲ, ಬೀಕರ ಬರಗಾಲವಾಗಿದ್ದರಿಂದ ಮುನ್ನೆಚ್ಚರಿಕೆವಾಗಿ ತಾಲ್ಲೂಕಿನ ಯಾವುದೇ ಗ್ರಾಮಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹೇಳಿದರು.
ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿರುವ ಕುಡಿಯುವ ನೀರಿನ ಮುಂಜಾಗ್ರತಾ ಕ್ರಮದ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಈಗಾಗಲೇ ನಿನ್ನೆಯ ದಿನ ಗ್ರೌಂಡ್ ಲೆವಲ್ಲಲ್ಲಿ ಕೆಲಸವಾಗುತ್ತಿಲ್ಲೆಂದು ಶಾಸಕ ಯಶವಂತರಾಯಗೌಡ ಪಾಟೀಲ್ & ಜಿಲ್ಲಾ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಈ ಕೂಡಲೇ ಕುಡಿಯುವ ನೀರಿನ ಬಗ್ಗೆ ಚುರುಕು ಕೆಲಸ ನಡೆಯಬೇಕು ಎಂದು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಹೇಳಿದರು.
ಸೆ- 9 ರಂದು ತಾಲೂಕು ಮಟ್ಟದ ಅಧಿಕಾರಿಗಳನ್ನು ಪಂಚಾಯತ್ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರೂ ಪಂಚಾಯತ್ ಗೆ ತೆರಳಿ ಮುಂಜಾಗ್ರತೆಗೆ ಸಭೆ ನಡೆಸಿ ಸಮಸ್ಯೆ ಕಂಡುಕೊಳ್ಳುವ ಮತ್ತು ಪರಿಹಾರ ಮಾರ್ಗಗಳ ಬಗ್ಗೆ ಕಾಳಜಿವಹಿಸಿಲ್ಲ ಎಂದು ಉಪವಿಭಾಗ ಅಧಿಕಾರಿ ಗರಂ ಆದರು.
ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಅತೀ ತುರ್ತು ಸಭೆ ನಡೆಸಿ ಅಲ್ಲಿರುವ ಸಮಸ್ಯೆ ಮತ್ತು ಪರಿಹಾರದ ಮಾರ್ಗಗಳ ಬಗ್ಗೆ ತಾಲೂಕು ಆಡಳಿತಕ್ಕೆ ಅತೀ ಶೀಘ್ರವಾಗಿ ಮಾಹಿತಿ ತಲುಪಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಯಾವ ಕೆರೆಯಲ್ಲಿ ಎಷ್ಟು ನೀರಿನ ಪ್ರಮಾಣವಿದೆ ಎಂದು ತಿಳಿದುಕೊಂಡರು. ಹಂಜಗಿ ಕೆರೆಯಲ್ಲಿ 30%, ಲೋಣಿ ಕೆಡಿ ಕೆರೆಯಲ್ಲಿ 50%, ಅರ್ಜನಾಳ ಕೆರೆಯಲ್ಲಿ 35%, ತಡವಲಗಾ ಕೆರೆಯಲ್ಲಿ 10% ನೀರು ಇದ್ದ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಎಇಇ ಎಸ್ ಆರ್ ರುದ್ರವಾಡಿ ಅವರು ಹೇಳಿದರು. ಒಟ್ಟಾರೆಯಾಗಿ ಹಂಜಗಿ ಕೆರೆ ಮೇಲೆ ಅತೀ ಹೆಚ್ಚು ಜವಾಬ್ದಾರಿ ನೀರು ತುಂಬಿಸಿದ್ರೆ ಸುಮಾರು 27 ಗ್ರಾಮಕ್ಕೆ ನೀರಿನ ಸಮಸ್ಯೆ ತಪ್ಪುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ.ಎಸ್ ಕಡಕಭಾವಿ, ಕೆಬಿಜೆಎನ್ ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಹೆಸ್ಕಾಂ ಇಲಾಖೆ ಅಧಿಕಾರಿ ಎ.ಎಸ್ ಬಿರಾದಾರ, ಕೆಬಿಜೆನ್ಎಲ್ ವಿಜಯಕುಮಾರ್, ತಾ.ಪಂ ಇಒ ಬಾಬು ರಾಠೋಡ, ಸಿಪಿಐ ಎಮ್ ಎಮ್ ಡಪ್ಪಿನ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Related Posts
Add A Comment