ತಿಕೋಟಾ: ಶಿಕ್ಷಣ ಎಂದರೆ ಕೇವಲ ಓದು ಬರಹ ಅಲ್ಲ, ಮಕ್ಕಳಲ್ಲಿ ಅಡಗಿರುವ ಯಾವುದೇ ವಿಶೇಷ ಪ್ರತಿಭೆಯನ್ನು ಗುರ್ತಿಸಿ ಹೊರ ಹಾಕಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಿ ಮಕ್ಕಳನ್ನು ತಯಾರಿಸವುದಾಗಿದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ವಿಜಯಪುರ ತಾಲ್ಲೂಕಿನ ಕಗ್ಗೋಡ ಗ್ರಾಮದ ಪ್ರಕೃತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಗ್ರಾಮೀಣವಲಯದ ವತಿಯಿಂದ ಬುಧವಾರ ನಡೆದ 2022-23 ನೇ ಸಾಲಿನ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ಪೂರ್ಣ ಜೀವನವನ್ನು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಒದಗಿಸಿರುತ್ತಿರಿ. ತಂದೆ ತಾಯಿಗಿಂತ ಹೆಚ್ಚು ಮಗು ಶಿಕ್ಷಕರ ಜೊತೆ ಇರುತ್ತದೆ. ಅವರು ನೀಡಿದ ಶಿಕ್ಷಣ ಜೀವನ ಪರ್ಯಂತ ಯಾರು ಮರೆಯುವದಿಲ್ಲ. ಶಾಸಕ, ಮಂತ್ರಿ, ಉದ್ಯಮಿಯಾದರೂ ಪ್ರಾಥಮಿಕ ಶಿಕ್ಷಕರು ನೀಡಿದ ಶಿಕ್ಷಣ ಮರೆಯಲಾರರು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಬುರಣಾಪುರ ಸಿದ್ದಾರೂಢ ಮಠದ ಮಾತೋಶ್ರೀ ಮಾತನಾಡಿದರು.
ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೊಲಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭೆ ಇರುವ ಮಕ್ಕಳನ್ನೆ ನಿರ್ಣಾಯಕರು ಆಯ್ಕೆ ಮಾಡಿ ಜಿಲ್ಲಾ ಮಟ್ಟಕ್ಕೆ ಕಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುಭಾಸ ತಂಬ, ಮುಖ್ಯೋಪಾಧ್ಯಾಯಿನಿ ಭಾರತಿ ತಂಬ, ನೋಡಲ್ ಅಧಿಕಾರಿ ರವೀಂದ್ರ ಚಿಕ್ಕಮಠ, ಕಾಸಯ್ಯ ಹಿರೇಮಠ, ಸಾಹೇಬಗೌಡ ಪಾಟೀಲ, ಶಿವಾನಂದ ಬಾಗಲಕೋಟ, ಅಶೋಕ ಚನಬಸಗೋಳ ಐ.ಎ.ತೇಲಿ, ಸಾಬು ಗಗನಮಾಲಿ, ವಿ.ಎ.ಚಟ್ಟರಕಿ, ಜಗದೀಶ ಬೋಳಸೂರ, ಚನ್ನಯ್ಯ ಮಠಪತಿ, ನೀಲಾ ಇಂಗಳೆ, ನೀಜು ಮೇಲಿನಕೇರಿ, ಚಿತ್ತರಗಿ, ರವೀಂದ್ರ ಉಗಾರ, ಬಿ.ಎಸ್.ಮಠ, ಎಚ್.ಎಸ್.ಇಂಡಿ ಇದ್ದರು.
ಕಾರ್ಯಕ್ರಮವನ್ನು ಆರ್.ಕೆ.ಕುಲಕರ್ಣಿ, ಶಿಲ್ಪಾ ಭಸ್ಮೆ, ಶ್ರೀಕಾಂತ ಬಿ.ಎಂ. ನೆರವೇರಿಸಿದರು.
Related Posts
Add A Comment