ಸಿಂದಗಿ: ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಕೊನೆಗೊಂಡಾಗ ಹೃದಯಾಘಾತ ಸಂಭವಿಸುತ್ತದೆ ಎಂದು ಹೃದಯ ರೋಗ ತಜ್ಞ ಡಾ.ಗೌತಮ ವಗ್ಗರ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾ ಶಿವಯೋಗಿಗಳ 83 ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯ ಎಮ್ಮಿಗನೂರು ಜಡೆಸಿದ್ದೇಶ್ವರ ಮಹಾ ಶಿವಯೋಗಿಗಳ ಪ್ರವಚನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹೃದಯಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಕೊರತೆಯು ಪೀಡಿತ ಪ್ರದೇಶಕ್ಕೆ ಹಾನಿಯನ್ನು ಉಂಟುಮಾಡಬಹುದು. ಪರಿಣಾಮವಾಗಿ, ಹೃದಯ ಸ್ನಾಯು ಕ್ಷೀಣಿಸಲು ಪ್ರಾರಂಭಿಸುತ್ತದೆ.
ನಿಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ರಕ್ತ ಮತ್ತು ಆಮ್ಲಜನಕವನ್ನು ಪಡೆಯದಿದ್ದರೆ, ನೀವು ಹೃದಯ ವೈಫಲ್ಯ ಮತ್ತು ಇತರ ಹಾನಿಕಾರಕ ಪರಿಣಾಮಗಳನ್ನು ಪಡೆಯುವ ಸಾಧ್ಯತೆ ಹೆಚ್ಚು.
ಹೃದಯಾಘಾತವು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ತೀವ್ರವಾದ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ನಿಮ್ಮ ಹೃದಯದ ರಕ್ತದ ಹರಿವನ್ನು ಸಹಜ ಸ್ಥಿತಿಗೆ ತರಲು ನೀವು ಎಷ್ಟು ಬೇಗನೆ ಚಿಕಿತ್ಸೆಯನ್ನು ಪಡೆಯುವ, ಯಶಸ್ವಿ ಶಸ್ತ್ರಚಿಕಿತ್ಸೆ ಹೊಂದುವ ಸಾಧ್ಯತೆಗಳು ಉತ್ತಮವಾಗಿರುತ್ತದೆ. ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತರಾಗಿ ಬಾಳಬೇಕು ಎಂದು ಡಾ.ವಗ್ಗರ ಸಲಹೆ ನೀಡಿದರು.
ತಾಳಿಕೋಟಿಯ ಹಿರೂರ ಶ್ರೀ ಅನ್ನ ದಾನೇಶ್ವರ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿದರು.
ಗ್ರಾಮದ ಹಿರೇಮಠದ ಶಂಕ್ರಯ್ಯ ಗುರಲಿಂಗಯ್ಯ ಹಿರೇಮಠ. ಸದ್ಗುರು ವಿರೇಶ್ವರ ಮಠದ ಪ್ರಮುಖ ಅರ್ಚಕ ಶಾಂತಯ್ಯ ಮಠವತಿ ವೇದಿಕೆ ಮೇಲಿದ್ದರು.
ಗುರುನಾಥ ಮೈಂದರಗಿ ಸೇವೆ ಮಾಡಿದರು. ಮಹೇಶ ಕುಮಾರ ಗವಾಯಿ ಭಂಟನೂರ ಹಾಗೂ ಮಹಾಂತೇಶ ಕಾಳಗಿ ಸಂಗೀತ ಸೇವೆ ನೆರವೇರಿಸಿದರು.
ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ
ಪ್ರಕಾಶ ತುಪ್ಪದ ಸ್ವಾಗತಿಸಿದರು. ರುದ್ರಗೌಡ ಮಾಗಣಗೇರಿ ನಿರೂಪಿಸಿದರು. ಚಂದ್ರಕಾಂತ ರಾಮಗೊಂಡ ವಂದಿಸಿದರು.
Related Posts
Add A Comment