ವಿಜಯಪುರ: ಅನಾಮಧೇಯ ಅಂದಾಜು ೬೦ ರಿಂದ ೬೫ ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತು ತಿಕೋಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಪೋಲಿಸ್ ಠಾಣೆ ಸಬ್‌ಇನ್ಸಪೆಕ್ಟರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಪತ್ತೆಯಾದ ವ್ಯಕ್ತಿಯು ೫.೪ ಫೂಟ್ ಎತ್ತರ, ಸಾಧಾರಣ ಮೈಕಟ್ಟು, ಉದ್ಧ ಮುಖ, ಸಾದ ಗಪ್ಪು ಮೈ ಬಣ್ಣ, ಮೈಮೇಲೆ ಪಿಂಕ್ ಕಲರ್ ಶರ್ಟ ಮತ್ತು ನೀಲಿ ಬಣ್ಣದ ಲುಂಗಿ ಧರಿಸಿದ್ದಾನೆ. ಈ ಚಹರೆಪಟ್ಟಿಯುಳ್ಳ ವ್ಯಕ್ತಿ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ತಿಕೋಟಾ ಪೋಲಿಸ್ ಠಾಣೆ ದೂ:೦೮೩೫೨-೨೩೧೫೩೩, ಮೊ: ೯೪೮೦೮೦೪೨೪೮, ಸಿಪಿಐ ಗ್ರಾಮೀಣ ವೃತ್ತ ದೂ: ೦೮೩೫೨-೨೫೧೨೧೭, ಮೊ: ೯೪೮೦೮೦೪೨೩೧ ಅಥವಾ ಕಂಟ್ರೋಲ್ ರೂಂ. ವಿಜಯಪುರ ದೂ: ೦೮೩೫೨-೨೫೦೮೪೪ ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Related Posts
Add A Comment