ದೇವರಹಿಪ್ಪರಗಿ: ಕಾಲುವೆಗೆ ನೀರು ಪೂರೈಸುವ ವಿಷಯದಲ್ಲಿ ರೈತಪರ ಧ್ವನಿಯಾಗಿ ನಿಮ್ಮ ಜೊತೆ ಹೋರಾಟಗಳಲ್ಲಿ ಭಾಗಿಯಾಗಲು ನಾನು ಸದಾ ಸಿದ್ದ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ಪಟ್ಟಣದ ಹತ್ತಿರದಲ್ಲಿಯ ನಾಗಠಾಣ ಉಪಕಾಲುವೆಗೆ ಸೋಮವಾರ ಭೇಟಿ ನೀಡಿ, ನೀರಿನ ಮಟ್ಟ ವೀಕ್ಷಣೆ ಮಾಡುವುದರ ಮೂಲಕ ರೈತರೊಂದಿಗೆ ಮಾತನಾಡಿದರು.
ಮಳೆಯ ಅಭಾವದಿಂದ ಈ ಭಾಗದ ಬೆಳೆ ಹಾನಿಗೊಳಗಾಗಿದ್ದು, ಉಳಿದ ಬೆಳೆಗಾಗಿ ಕಾಲುವೆಗೆ ನೀರು ಹರಿಸಲು ಈಗಾಗಲೇ ನಾನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಸಹ ಸ್ಪಂದಿಸಿ ನೀರು ಹರಿಯುವಂತೆ ಕ್ರಮ ಕೈಗೊಂಡಿದ್ದಾರೆ. ಈಗ ಸತತ ನಾಲ್ಕು ದಿನಗಳಿಂದ ಹರಿಯುತ್ತಿರುವ ನೀರು ಕೆಲವು ಕಡೆ ಪೋಲಾದ ಕಾರಣ ಕಡ್ಲೇವಾಡ ಪಿಸಿಎಚ್, ಮುಳಸಾವಳಗಿ, ಚಿಕ್ಕರೂಗಿ ಕೆರೆಗಳನ್ನು ತಲುಪುತ್ತಿಲ್ಲ. ಆದ್ದರಿಂದ ನೀರು ಪೋಲಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅದಕ್ಕಾಗಿ ನಾನು ಈಗ ರೈತಪರ ಧ್ವನಿಯಾಗಿ ಮನವಿ ಮಾಡುತ್ತೇನೆ. ಜೊತೆಗೆ ರೈತರು ಸಹ ಕಾಲುವೆ ನೀರನ್ನು ವ್ಯರ್ಥ ಮಾಡದೇ ಸಹಕಾರ ನೀಡಬೇಕು ಎಂದರು.
ರೈತರಾದ ಸಂಗಣ್ಣ ಶಿನ್ನೂರ, ಭೀಮಾಶಂಕರ ಹಳ್ಳಿ, ರಾಮಪ್ಪ ಹಿಪ್ಪರಗಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ರೈತರಾದ ಸಂಪತ್ ಜಮಾದಾರ, ಗಿರಿಮಲ್ಲಪ್ಪ ಇಂಡಿ, ಶ್ರೀಶೈಲ ದಾನಗೊಂಡ, ಸೋಮಶೇಖರ ಹಿರೇಮಠ, ರಾಜು ದಾನಗೊಂಡ, ಬಸಪ್ಪ ಮೆಟಗಾರ, ರಾಮನಗೌಡ ಪಾಟೀಲ, ಅಮೋಘಿ ಪೂಜಾರಿ, ಆನಂದ ಕೊಣ್ಣೂರ(ಇಂಗಳಗಿ),ದೇವಾನಂದ ಹಡಪದ, ಜಟ್ಟಿಂಗರಾಯ ಬಾಗಲಕೋಟ, ಮೌಲಾಲಿ ಕೆಂಗನಾಳ(ಚಿಕ್ಕರೂಗಿ), ನಾಗೇಶ ಬಿರಾದಾರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
Related Posts
Add A Comment