ವಿಜಯಪುರ: ಯಾವುದೇ ಕಾರ್ಯ ಮಾಡಿ ಅದನ್ನು ಸಿದ್ದಿಸಲು ಧರ್ಮದ ಅನುಸರಣೆ ಅಗತ್ಯವಾಗಿದೆ ಅದನ್ನು ಎಲ್ಲ ರಂಗಗಳಲ್ಲಿ ಜಯ ಪಡೆದುಕೊಳ್ಳಲು ಸಾಧ್ಯ ಎಂದು ಮುತ್ತಗಿಯ ಅರ್ಚಕ ಪಂ. ನರಹರಿ ಆಚಾರ್ಯ ಜೋಶಿ ಅವರು ಹೇಳಿದರು.
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ ಇದರ ಆಶ್ರಯದಲ್ಲಿ ಪ್ರತಿತಿಂಗಳು ನಡೆಸುತ್ತಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಮೋಹನ ತರಂಗಿಣಿ ಕುರಿತು ಉಪನ್ಯಾಸ ನೀಡುತ್ತದ್ದ ಅವರು ಕನಕದಾಸರ ಈ ಕೃತಿಯಲ್ಲಿಯೂ ಕೂಡಾ ಅನಿರುದ್ದ-ಉಷೆ ಇವರ ಮದುವೆ ರಸಾನು ಸಂದರ್ಭದಲ್ಲಿಯೂ ಧರ್ಮದ ತಳಹದಿಯ ಮೇಲೆ ನಿಂತ ಪ್ರಸಂಗದ ವಿವರಣೆಯನ್ನು ನೀಡಿ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಕೊಡುವದನ್ನು ಕಲಿಸಬೇಕು ಅಂದಾಗ ಮಾತ್ರ ಹೊಸದನ್ನು ಅವರಲ್ಲಿ ಬಂದು ಸೇರುತ್ತದೆ. ಮತ್ತೇ ಅವನು ದೊಡ್ಡವನಾಗುವದರೊಂದಿಗೆ ಸಮಾಜದ ಅರಿವು ಆಗು-ಹೋಗುಗಳಿಗೆ ಅವನಲ್ಲಿ ಜ್ಞಾನ ಬರಲು ಸಾಧ್ಯ ಎಂದವರು ಹೇಳಿದರು.
ಕನಕದಾಸರು ದಾಸನಾಗುವ ಹಾಗೂ ವ್ಯಾಸತೀರ್ಥರಲ್ಲಿ ಶಿಷ್ಯನಾಗುವ ಮೊದಲು ರಚಿಸಿದ ಕೃತಿ ಮೊಹನ ತರಂಗಿಣಿ ಇದರಲ್ಲಿ ೪೨ ತರಂಗಗಳು ಬರುತ್ತಿದ್ದು ಇದೊಂದು ಅದ್ಬುತ ಗ್ರಂಥವಾಗಿದೆ. ಪ್ರದ್ಯುಮ್ನನ ಮಗನೆ ಅನಿರುದ್ದ ಇತನ ಹಾಗೂ ಬಾಣಾಸುರನ ಮಗಳಾದ ಉಷೆ ನಡುವೆ ನಡೆದ ಮದುವೆ ರಸಗಳು ಇದರಲ್ಲಿ ಬರುತ್ತಿದ್ದು, ಇದು ಧರ್ಮ ಜಾಗೃತಿ ಮತ್ತು ಉಳಿಸಿ ಬೆಳೆಸುವ ಕಥೆಗಳು ಬರುತ್ತಿವೆ ಇವು ನಿಜ ಜೀವನದಲ್ಲಿ ಸತ್ಯ ರೂಪದಲ್ಲಿ ಬರುವಂತಹುಗಳಾಗಿವೆ. ಉಷೆಗೆ ನೋಡಿದ್ದನ್ನು ಚಿತ್ರಿಸುವ ಕಲೆ ಇತ್ತು, ಇವುಗಳ ಕುರಿತು ವಿದ್ಯಾರ್ಥಿಗಳಲ್ಲಿಯೂ ನಿಷ್ಠೆ, ಶ್ರದ್ದೆ ಬರುವಂತಾಗಬೇಕೆಂದು ಹೇಳಿದರು.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶ್ವಕ್ಕೆ ಸ್ವಾಮಿ ವಿವೇಕಾನಂದರು ನೀಡಿದ ಕೊಡುಗೆ ಅಪಾರವಾದುದು ಜೀವನದಲ್ಲಿ ಉತ್ತಮ ಬದುಕು ಸಾಧಿಸಲು ಸಮಾಜಕ್ಕೆ ಮತ್ತು ದೇಶಕ್ಕೆ ಮಹತ್ವವನ್ನು ನೀಡಿ ಆಧ್ಯಾತ್ಮದ ಬದುಕನ್ನು ಹಸನಗೊಳಿಸಲು ಅವರು ಪ್ರಯತ್ನಿಸಿದರು ಎಂದು ಸಾಹಿತಿ ಸುಭಾಷ ಯಾದವಾಡ ಹೇಳಿದರು.
ವಿಶ್ವಕ್ಕೆ ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಕೊಡುಗೆ ವಿಶೇಷ ಉಪನ್ಯಾಸ ಮಾಡುತ್ತಿದ್ದ ಅವರು ಪೌರಾತ್ವ ಮತ್ತು ಪಾಶ್ಚಿಮಾತ್ಯ ದೇಶಗಳ ಜೋಡಿಸುವ ಕೊಂಡಿಯಾಗಿ ಕೆಲಸ ಮಾಡಿದ ಅವರು ಕೇವಲ ೯ ವರ್ಷ ಮಾತ್ರ ಸಾಮಾಜಿಕ ಜೀವನದಲ್ಲಿ ಕಾರ್ಯಮಾಡಿ ವಿಶ್ವಕ್ಕೆ ಆಧ್ಯಾತ್ಮೀಕತೆಯ ಕೊಡುಗೆಯನ್ನು ವಿವೇಕಾನಂದರು ನೀಡಿದರು. ದೇಶದ ಬಗ್ಗೆ ಗೌರವ ಹೊಂದಿ ತಾಯ್ನಾಡಿನ ಪ್ರೇಮತ್ವವನ್ನು ವಿಶ್ವಕ್ಕೆ ತೋರಿಸಿ ಹಿಂದು ಧರ್ಮದ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಎಂದು ವಿವರಿಸಿದರು.
ಉಕ್ಕಿನ ಮನುಷ್ಯ ವಲ್ಲಭಾಯಿ ಪಟೇಲ ಅವರು ಜನ್ಮ ದಿನ ಹಾಗೂ ಶ್ರೀಮತಿ ಇಂದಿರಾ ಗಾಂಧಿಜಿ ಅವರ ಪುಣ್ಯ ಸ್ಮರಣೆಯಾದ ಇಂದು ಅವರು ಹಾಕಿ ಕೊಟ್ಟ ದಿಟ್ಟ ಕ್ರಮ, ದಿನ ದಲಿತರಿಗಾಗಿ ಮಾಡಿದ ೨೦ ಅಂಶಗಳ ಕಾರ್ಯಕ್ರಮ ಇಂದಿಗೂ ಪ್ರಸ್ತುತದಲ್ಲಿರುವಂತೆ ಇವೆ. ಇಂದು ಅವರು ಹಾಕಿಕೊಟ್ಟ ಯೋಜನೆ ನೆನೆಸುವಂತೆ ನಡೆಯತ್ತಿವೆ ಎಂದು ನಿವೃತ್ತ ನಿಬಂಧಕರಾದ ಬಿ.ಆರ್.ಬನಸೋಡೆ ಅವರು ಅವರ ಸ್ಮರಣೆ ಮಾಡಿದರು.
.ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಎ. ಜಿದ್ದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವ್ಹಿ.ಡಿ.ವಸ್ತçದ, ಬಸವರಾಜ ಮೇಟಿ, ಸಿದ್ದನಗೌಡ ಶಿವಣಗಿ, ನ್ಯಾಯವಾದಿ ಕೆ.ಎಫ್.ಅಂಕಲಗಿ, ಶ್ರೀಮತಿ ವಿದ್ಯಾವತಿ ಅಂಕಲಗಿ, ಮಾಜಿ ಕಸಾಪ ಅಧ್ಯಕ್ಷ ಬಿ. ಎಂ. ಪಾಟೀಲ, ಕೆ.ಆರ್.ನಾಗೋಡ, ನಿವೃತ್ತ ಶಿಕ್ಷಕ ಕುಲಕರ್ಣಿ, ಆಡಳಿತಾಧಿಕಾರಿ ಆರ್. ಎಸ್. ವಾಡೇದ, ವಿ.ಎಸ್.ಶಿರೋಳ, ವಿ.ಎಸ್. ಕುಲಕರ್ಣಿ ಹಾಗೂ ತಾಜಪೂರ, ಕಕಮರಿಯ ಶಿಕ್ಷಕರು ಸಿಬ್ಬಂದಿ ಭಾಗವಹಿಸಿದ್ದರು.
ಆಯ್.ಎನ್. ಕಂಬಾರ ಸ್ವಾಗತಿಸಿ, ನಿರೂಪಿಸಿದರು. ಎಚ್.ಮರನೂರ ವಂದಿಸಿದರು.
ಆಧ್ಯಾತ್ಮಿಕ ಕ್ಷೇತ್ರಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ
Related Posts
Add A Comment