ವಿಜಯಪುರ: ನಗರದ ಬುದ್ಧವಿಹಾರ ನಿರ್ಮಾಣ ಸಮಿತಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಕಳೆದ ಮೂರು ತಿಂಗಳುಗಳಿಂದ ನಡೆಸಿಕೊಂಡು ಬಂದ ವರ್ಷಾವಾಸ ಕಾರ್ಯಕ್ರಮದ ಸಮಾರೋಪ ಸಮಾರಂಭವು ನ. ೫ ರಂದು ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಜರುಗಲಿದೆ ಎಂದು ಬುದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು ಅವರು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಆಯುಷ್ ಆಸ್ಪತ್ರೆಯ ಹತ್ತಿರದ ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನದಿಂದ ಸಾರಿಪುತ್ರ- ಬೋಧಿಧಮ್ಮ ಬುದ್ಧವಿಹಾರದವರೆಗೆ ಬೆಳ್ಳಿರಥದಲ್ಲಿ ತಥಾಗತ ಗೌತಮ ಬುದ್ಧರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಗಳ ಮೆರವಣಿಗೆ ಪೂಜ್ಯ ಭಿಕ್ಖುಸಂಘದ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.
ನಂತರ ೧೦ ಗಂಟೆಗೆ ಬುದ್ಧವಿಹಾರದಲ್ಲಿ ಧಮ್ಮ ಪ್ರವಚನ ನಡೆಯಲಿದ್ದು, ಪೂಜ್ಯ ಭಿಕ್ಖುಸಂಘಕ್ಜೆ ಅಷ್ಟಪರಿಷ್ಕಾರ ಚೀವರದಾನ, ಬೌದ್ಧ ವಿಹಾರ ನಿರ್ಮಾಣ ಸಮಿತಿಯ ನೂತನ ಸಲಹಾ ಸಮಿತಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಜರುಗಲಿದೆ.
ಕಾರಣ ಬುದ್ಧವಿಹಾರ ನಿರ್ಮಾಣ ಸಮಿತಿ ನಿರ್ದೇಶಕರುಗಳು, ಸಲಹಾ ಸಮಿತಿ ಸದಸ್ಯರು, ದಲಿತ, ಪ್ರಗತಿಪರ ಸಂಘಟನೆಯ ಮುಖಂಡರುಗಳು ಸೇರಿದಂತೆ ಎಲ್ಲ ಬುದ್ಧಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
Related Posts
Add A Comment