ದೇವರಹಿಪ್ಪರಗಿ: ಸಾತಿಹಾಳ ಗ್ರಾಮ ಪಂಚಾಯಿತಿಯಲ್ಲಿ ಐಇಸಿ ಚಟುವಟಕೆಯ ಅಂಗವಾಗಿ ಉದ್ಯೋಗ ಜಾಗೃತಿ ರಥಯಾತ್ರೆ ವಾಹನಕ್ಕೆ ಚಾಲನೆ ನೀಡಲಾಯಿತು.
ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ೨೦೨೪-೨೫ ನೇಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕ್ರೀಯಾ ಯೋಜನೆ ಸಿದ್ಧಪಡಿಸುವ ಉದ್ದೇಶದಿಂದ ಸಾರ್ವಜನಿಕರಿಂದ ವೈಯಕ್ತಿಕ ಕಾಮಗಾರಿಗಳ ಅರ್ಜಿಗಳನ್ನು ಆಹ್ವಾನಿಸಲು ಉದ್ಯೋಗ ರಥ ಯಾತ್ರೆ ವಾಹನಕ್ಕೆ ಶನಿವಾರ ಹಸಿರು ನಿಶಾನೆ ತೋರುವುದರ ಮೂಲಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆನಂದ ಅಡಹಳ್ಳಿ ಚಾಲನೆಗೊಳಿಸಿ ಮಾಹಿತಿ ನೀಡಿದರು.
ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿ ಕೃಷಿ ಹೊಂಡ, ಬದು ನಿರ್ಮಾಣ, ಕುರಿ ಅಥವಾ ಆಡು, ದನದ ಕೊಟ್ಟಿಗೆ ಹೀಗೆ ಹಲವು ಕಾಮಗಾರಿಗಳನ್ನು ಪಡೆದುಕೊಂಡು ಸುಸ್ಥಿರತೆಯ ಜೀವನ ನಡೆಸಲು ನರೇಗಾ ಯೋಜನೆ ನೆರವಾಗುತ್ತದೆ ಎಂದು ಐಸಿ ಸಂಯೋಜಿಕ ಸಿದ್ದು ಕಾಂಬಳೆ ತಿಳಿಸಿದರು,
ಉದ್ಯೋಗ ರಥ ವಾಹನವು ಗ್ರಾಮದ ಬೀದಿಬೀದಿಗಳಲ್ಲಿ ಸಂಚರಿಸಿ ನರೇಗಾ ಯೋಜನೆಯ ಮಾಹಿತಿ ನೀಡಿತು. ಸಾರ್ವಜನಿಕರಿಂದ ಫಾರ್ಮ್ ನಂಬರ್ ೬ನ್ನು ತುಂಬಿ ಕೆಲಸದ ಬೇಡಿಕೆ ಡಬ್ಬದಲ್ಲಿ ಕೆಲಸದ ಬೇಡಿಕೆ ಪಡೆಯಲಾಯಿತು.
ಪರಶುರಾಮ ಚವ್ಹಾಣ, ತಾಂಡ ರೋಜ್‌ಗಾರ್ ಮಿತ್ರ ವಿನೋದ ರಾಥೋಡ, ಮಹಾದೇವಿ ಕುಟಕನೂರ, ಪ್ರಭು ಹರಿಜನ, ಶಿವಾನಂದ ಬಿರಾದಾರ ಇದ್ದರು.
Related Posts
Add A Comment