ವಿಜಯಪುರ: ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಸಿನಿಯರ್ ರಿಸರ್ಚ್ ಫೆಲೋ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ನವೆಂಬರ್ ೧೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೃಷಿ ಮಹಾವಿದ್ಯಾಲಯದ ಡೀನ್ ಸಂದರ್ಶನ ಕೊಠಡಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.
ನೇಮಕಾತಿ ಪಡೆಯಲಿಚ್ಚಿಸುವರು, ಫಾರ್ಮ ಮೆಶಿನರಿ ಮತ್ತು ಪಾವರ ಇಂಜಿನಿಯರ್ ನಲ್ಲಿ ಸ್ನಾತಕ ಪದವಿ ಹೊಂದಿರಬೇಕು. ಬಿ.ಟೆಕ್ (ಕೃಷಿ ಇಂಜಿನಿಯರ್) ನಾಲ್ಕು ವರ್ಷದ ಪದವಿ ಜೊತೆಗೆ ಮೆಶಿನರಿ ಟೆಸ್ಟಿಂಗ್‌ನಲ್ಲಿ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ೩೧ ಸಾವಿರ ರೂ. ಹಾಗೂ ಎಚ್‌ಆರ್‌ಎ, ಟಿಎ & ಡಿಎ ಸೌಲಭ್ಯ ಒದಗಿಸಲಾಗುವುದು.
ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ಮತತು ಭಾವಚಿತ್ರದೊಂದಿಗೆ ಹಾಜರಾಗಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೩೦೫೭೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment