ವಿಜಯಪುರ: ಜಿಲ್ಲೆಯ ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರಾತಿಗಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ೧೪ ಗ್ರಾಮಗಳಲ್ಲಿ ನವೆಂಬರ್ ೪ ರಂದು ಬೆಳಿಗ್ಗೆ ೧೧ ಗಂಟೆಗೆ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಮಖಣಾಪೂರ ಗ್ರಾಮದ ಶ್ರೀ ಸೋಮನಿಂಗೇಶ್ವರ ದೇವಸ್ಥಾನದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿಗಳು, ಗುತ್ತರಗಿ ಶ್ರೀ ಕರಿವಿರೇಶ್ವರ ದೇವಸ್ಥಾನದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳು, ನಾಗಠಾಣ ನಾಡಕಚೇರಿ ಆವರಣದಲ್ಲಿ ವಿಜಯಪುರ ತಹಶೀಲ್ದಾರ ಗ್ರೇಡ್-೨ ಅವರು ಹಾಗೂ ಕೊಡಬಾಗಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ ಅವರು ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಅತಾಲಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ತಿಕೋಟಾ ತಹಶೀಲ್ದಾರ ಗ್ರೇಡ್-೨, ಅರಳಿಚಂಡಿ ಶ್ರೀ ಹಿರೋಡೇಶ್ವರ ದೇವಸ್ಥಾನದಲ್ಲಿ ಬಸವನಬಾಗೇವಾಡಿ ಗ್ರೇಡ್-೨ ತಹಶೀಲ್ದಾರ, ಮಜರೆಕೊಪ್ಪ ಗ್ರಾಮ ದೇವತೆ ದೇವಸ್ಥಾನದಲ್ಲಿ ನಿಡಗುಂದಿ ಗ್ರೇಡ್-೨ ತಹಶೀಲ್ದಾರ, ಬಾಗಾನಗರ ಲಕ್ಷಮ್ಮದೇವಿ ದೇವಸ್ಥಾನದಲ್ಲಿ ಕೊಲ್ಹಾರ ತಹಶೀಲ್ದಾರ, ವಣಕಿಹಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ಮುದ್ದೇಬಿಹಾಳ ಗ್ರೇಡ್-೨ ತಹಶೀಲ್ದಾರ, ಚಬನೂರ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ ತಾಳಿಕೋಟೆ ತಹಶೀಲ್ದಾರ ಅವರು ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಹಿಂಗಣಿ ಗ್ರಾಮದ ಗ್ರಾಮ ಪಂಚಾಯತ್ ಕಾಯಾಲಯದಲ್ಲಿ ಇಂಡಿ ಗ್ರೇಡ್-೨ ತಹಶೀಲ್ದಾರ, ಜೀರಂಕಲಗಿ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದಲ್ಲಿ ಚಡಚಣ ಗ್ರೇಡ್-೨ ತಹಶೀಲ್ದಾರ, ಚಿಕ್ಕ ಅಲ್ಲಾಪೂರ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸಿಂದಗಿ ಗ್ರೇಡ್-೨ ತಹಶೀಲ್ದಾರ ಅವರು ಹಾಘೂ ಪಡಗಾನೂರ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ದೇವರಹಿಪ್ಪರಗಿ ಗ್ರೇಡ್-೨ ತಹಶೀಲ್ದಾರ ಅವರು ಪಿಂಚಣಿ ಅದಾಲತ್ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment