ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ರಕ್ಷಣಾ ವೇದಿಕೆ ವೃತ್ತ, ನಿವೃತ್ತ ನೌಕರರ ಸಂಘ ಸೇರಿದಂತೆ ವಿವಿಧೆಡೆಯಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಪಟ್ಟಣದಲ್ಲಿ ಭಾನುವಾರ ರಾಜ್ಯೋತ್ಸವ ಅಂಗವಾಗಿ ನಾಡದೇವಿಯ ಭಾವಚಿತ್ರಕ್ಕೆ ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಹಿರೇಮಠ ಪೂಜೆ ಸಲ್ಲಿಸಿದರು. ತಹಶೀಲ್ದಾರ ನಿಂಗಣ್ಣ ಬಿರಾದಾರ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಸುಮಂಗಲಾ ಸೇಬೆನವರ, ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಕರ್ನಾಟಕ ರಕ್ಷಣಾ ವೇದಿಕೆಯ ರಹಿಮಾನ ಕಣಕಾಲ, ಶಿವರಾಜ್ ತಳವಾರ, ಚಂದ್ರಶೇಖರ ದಾನಗೊಂಡ, ಮಡುಗೌಡ ಬಿರಾದಾರ, ಮುನ್ನಾ ಮಳಖೇಡ, ಮಂಜುನಾಥ ಇಂಡಿ, ಪ್ರಕಾಶ ಡೋಣೂರಮಠ, ಬಸವರಾಜ ಇಂಡಿ, ಇದ್ದರು.
ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆ:
ಶಾಲಾ ಆವರಣದಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕನ್ನಡದ ಹೋರಾಟಗಾರರು ಹಾಗೂ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರ, ಕವಿಗಳ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಂಸ್ಥೆಯ ಅಧ್ಯಕ್ಷ ವ್ಹಿ.ಕೆ. ಪಾಟೀಲ, ಆಡಳಿತಾಧಿಕಾರಿ ಕೆ.ಪಿ.ಮಾಲೀಪಾಟೀಲ, ಮಹಾಂತೇಶ ಬೀಳಗಿ, ಶ್ರೀಕಾಂತ ತೋಳನೂರ, ಕಾಶೀನಾಥ ಯಂಭತ್ನಾಳ, ರಾಜು ಕಾಖಂಡಕಿ ಸೇರಿದಂತೆ ಸಿಬ್ಬಂದಿ ಇದ್ದರು.
ನಿವೃತ್ತ ನೌಕರರ ಸಂಘ:
ಸದಯ್ಯನಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ನಿವೃತ್ತ ಉಪನ್ಯಾಸಕ ಎಂ.ಆರ್.ಶಿರಸಂಗಿಮಠ, ಸಂಘದ ಅಧ್ಯಕ್ಷ ಚನ್ನವೀರ ಕುದರಿ ಮಾತನಾಡಿದರು.
ಎಸ್.ವ್ಹಿ.ಆಲಾಳಮಠ, ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಎಂ.ಎಚ್.ಪಟೇಲ, ಬಿ.ಜಿ.ಪಾಟೀಲ, ಬಿ.ಎಸ್.ನಾಗೂರ, ಎನ್.ಎಸ್.ಹಿರೇಮಠ, ಎಂ.ಆರ್.ಮಠಪತಿ, ಬಿ.ಡಿ.ಲೋಣಿ, ಎ.ಸಿ.ಲೋಗಾವಿ, ಎನ್.ಎಸ್.ಹರಸೂರ ಸೇರಿದಂತೆ ಇತರರು ಇದ್ದರು.

