ಹೂವಿನಹಿಪ್ಪರಗಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ವಾಲ್ಮೀಕಿ ಜಯಂತಿ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಹೂವಿನಹಿಪ್ಪರಗಿ: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಕೇವಲ ಮಹಾಕಾವ್ಯವಲ್ಲ. ಇದು ಮಾನವನ ಬದುಕಿಗೆ ದಾರಿದೀಪ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಹೇಳಿದರು.
ತಾಲ್ಲೂಕಿನ ಹೂವಿನಹಿಪ್ಪರಗಿ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಜರುಗಿದ ಕನ್ನಡ ರಾಜ್ಯೋತ್ಸವ ಹಾಗೂ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
೭೧ನೇ ಕನ್ನಡ ರಾಜ್ಯೋತ್ಸವ ನಮಗೆ ನಾಡು,ನುಡಿ, ನೆಲ, ಜಲದ ಮಹತ್ವ ತಿಳಿಸುತ್ತದೆ . ಇಂದು ವಾಲ್ಮೀಕಿ ವೃತ್ತದ ನಿರ್ಮಾಣಕ್ಕೆ ವೈಯಕ್ತಿಕವಾಗಿ ೫೦ ಸಾವಿರ ದೇಣಿಗೆ ನೀಡಲಾಗುತ್ತಿದೆ ಎಂದರು.
ಪತ್ರಿವನಮಠದ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿ, ಮಹರ್ಷಿ ವಾಲ್ಮೀಕಿಯ ತಪಸ್ಸು, ತ್ಯಾಗ ಇವು ಸಾಧನೆಯ ಪ್ರತೀಕಗಳಾಗಿವೆ. ಅವರು ತೋರಿದ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಗ್ರಾಮದ ಮುಖಂಡ ಪ್ರಕಾಶ ಪಾಟೀಲ ಮತನಾಡಿ, ಮನುಷ್ಯ ಪ್ರಯತ್ನಿಸಿದರೇ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಜೀವನವೇ ಸಾಕ್ಷಿ. ಶಿಕ್ಷಣ ಹಾಗೂ ಸಂಸ್ಕಾರದಿಂದ ಸಮಾಜದ ಅಭಿವೃಧಿ ಸಾಧ್ಯ ಎನ್ನುವುದನ್ನು ಮಹರ್ಷಿ ತಿಳಿಸಿದ್ದಾರೆ ಎಂದರು.
ಕಾAಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ, ಸಂಗನಗೌಡ ಲಿಂಗದಳ್ಳಿ, ರಮೇಶ ಕೋರಿ, ಪಿ.ಜಿ.ಗೋಟೆದ, ಬಸನಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಪರಮೇಶ ಬಿರಾದಾರ, ಮುತ್ತು ವಂದಾಲ, ಸಂಗಪ್ಪ ಹೊರಗಿನಮನಿ, ಶಿವು ಬಿರಾದಾರ, ಸಿದ್ದು ಮೇಟಿ ಸೇರಿದಂತೆ ಗ್ರಾಮಸ್ಥರು ಇದ್ದರು.

