Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕನ್ನಡ ಅಂಕಿಗಳ ಬಳಕೆಯಿಂದ ಭಾಷೆ ಉಳಿಸಿ :ಪ.ಗು.ಸಿದ್ದಾಪುರ

ಕನ್ನಡ ಕೇವಲ ಭಾಷೆಯಲ್ಲ ನಮ್ಮ ಬದುಕು-ಸಂಸ್ಕೃತಿ-ಸ್ವಾಭಿಮಾನ

ಅಕ್ರಮ ಕಂಟ್ರಿ ಪಿಸ್ತೂಲ್ ವಶ :ಇಬ್ಬರ ಬಂಧನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾಡಿನ ಜಲಹಕ್ಕುಗಳೊಂದಿಗೆ ಖಂಡಿತ ರಾಜಿ ಇಲ್ಲ
(ರಾಜ್ಯ ) ಜಿಲ್ಲೆ

ನಾಡಿನ ಜಲಹಕ್ಕುಗಳೊಂದಿಗೆ ಖಂಡಿತ ರಾಜಿ ಇಲ್ಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭೀಮಾ-ಉಜನಿ ಜಲಾಶಯಕ್ಕೆ ಬೃಹತ್ ನೀರಾವರಿ ಯೋಜನೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ | ಈ ಯೋಜನೆಯಿಂದ ನಮಗೆ `ಮಹಾ’ ಆತಂಕವೆಂದ ಸಚಿವ ಎಂ.ಬಿ.ಪಾಟೀಲ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕೃಷ್ಣಾ ನದಿಯಿಂದ ಸುಮಾರು ೪೦ ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ವರ್ಗಾಯಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಹೆಜ್ಜೆ ಇರಿಸಿರುವುದು ಆಘಾತಕಾರಿ. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ, ಈ ಯೋಜನೆ ನಮಗೆ ಅತ್ಯಂತ ಮಾರಕ, ಆದರೆ ನಾವು ಈ ವಿಷಯದಲ್ಲಿ ರಾಜಿಯಾಗಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸರ್ವ ಪಕ್ಷ ಸಭೆ ಕರೆಯುವಂತೆ ವಿನಂತಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಗಂಭೀರವಾದ ಈ ಮಹಾರಾಷ್ಟ್ರ ಸರ್ಕಾರದ ಕ್ರಮ ಚರ್ಚೆಯಾಗಿರಲಿಲ್ಲ ಎಂದ ಅವರು ದೇವೆಂದ್ರ ಫಡ್ನವೀಸ್ ಅವರು ಮಾಧ್ಯಮ ಸಂಸ್ಥೆಯೊಂದರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ತುಣುಕು ಪ್ರದರ್ಶಿಸಿದರು.
ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣದ ಅಂತಿಮ ಅಧಿಸೂಚನೆ ಹೊರಡಿಸಿಲ್ಲ, ಅಷ್ಟಾದರೂ ಸಹ ವಿಶ್ವ ಬ್ಯಾಂಕ್ ನೆರವು ಈ ನೂತನ ಯೋಜನೆಗೆ ದೊರಕಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿರುವುದು ಅನೇಕ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಕ್ಲಿಯರೆನ್ಸ್ ಇಲ್ಲದೇ ವಿಶ್ವ ಬ್ಯಾಂಕ್ ನೆರವು ಪ್ರಸ್ತಾವನೆ ಹೇಗೆ ಸಾಧ್ಯ? ಈ ಎಲ್ಲ ವಿಷಯಗಳಿಗೂ ಸ್ಪಷ್ಟೀಕರಣ ದೊರಕಬೇಕಿದೆ ಎಂದರು.
ಇದು ನಮ್ಮ ಹಕ್ಕಿನ ವಿಷಯ, ಈ ಹಕ್ಕಿನ ವಿಷಯದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ, ಇದು ಪಕ್ಷಾತೀತವಾದ ಕೂಗು, ಈ ಹಿನ್ನೆಲೆಯಲ್ಲಿ ಕೃಷ್ಣಾ ಕಣಿವೆಯ ಎಲ್ಲ ಜನಪ್ರತಿನಿಧಿ, ಸಂಸದರ ಸುದೀರ್ಘವಾದ ಸಭೆ ನಡೆಸಿ ಅವಶ್ಯಬಿದ್ದರೆ ಸರ್ವ ಪಕ್ಷ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿಗಳಿಗೆ ಗಮನ ಸೆಳೆಯುವೆ ಎಂದರು. ಆಲಮಟ್ಟಿ ಯೋಜನೆಯ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿ ತೀರ್ಪಿನ ಪ್ರಕಾರ, ಹೆಚ್ಚುವರಿಯಾಗಿ ಹಂಚಿಕೆಯಾದ ೪೪೮ ಟಿಎಂಸಿ ಅಡಿ ನೀರಿನಲ್ಲಿ ಮಹಾರಾಷ್ಟ್ರಕ್ಕೆ ೮೧, ಕರ್ನಾಟಕಕ್ಕೆ ೧೭೩ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ ೧೯೪ ಟಿಎಂಸಿ ಅಡಿ ನಿಗದಿಯಾಗಿದೆ. ಈಗ ೪೦ ಟಿಎಂಸಿ ಅಡಿ ನೀರು ವರ್ಗಾಯಿಸುವ ಯೋಜನೆಗೆ ಯಾವ ಕಾನೂನು ಮತ್ತು ತಾಂತ್ರಿಕ ಆಧಾರವಿದೆಯೇ? ಎಂಬುದನ್ನು ಮಹಾ ಸರ್ಕಾರ ಪೂರ್ವಾಲೋಚಿಸಿಲ್ಲ ಎಂದು ಸಚಿವರು ಹೇಳಿದರು.

ಈ ಯೋಜನೆ ನಮಗೆ ಮಾರಕ

ಈ ನೀರನ್ನು ಮರಾಠವಾಡದ ಎರಡು ಜಿಲ್ಲೆಗಳು ಹಾಗೂ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಮಾರು ೧೯ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಡಿಪಿಆರ್ ಸಿದ್ಧಪಡಿಸಲು ೨೪ ಕೋಟಿ ಮಂಜೂರು ಮಾಡಿದ್ದು, ೮೪ ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿಯೂ ಇದೆ, ೨೦೨೬ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದೆ. ಅಲ್ಲದೆ, ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ವಿಶ್ವಬ್ಯಾಂಕ್ ಹಣಕಾಸು ನೆರವು ನೀಡುತ್ತಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಹಲವು ಗಂಭೀರ ಪ್ರಶ್ನೆಗಳನ್ನು ಉದ್ಭವಿಸುವಂತೆ ಮಾಡಿದೆ ಎಂದು ಸಚಿವ ಎಂಬಿಪಿ ಆತಂಕ ವ್ಯಕ್ತಪಡಿಸಿದರು.

ಮಹಾರಾಷ್ಟ್ರಕ್ಕೊಂದು ಮಾನದಂಡ ಬೇರೆಯೇ?

ಇನ್ನೊಂದೆಡೆ, ಇದೇ ಕೆಡಬ್ಲೂಡಿಟಿ ತೀರ್ಪು ಅಧಿಸೂಚಿತವಾಗಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಮಹತ್ವಾಕಾಂಕ್ಷಿ ಆಲಮಟ್ಟಿ ಮೇಲ್ದಂಡೆ ಯೋಜನೆ ಹಂತ ಯ ಡಿಪಿಆರ್ ಅನ್ನು ಕೇಂದ್ರ ಸರ್ಕಾರ ಹಿಂದಿರುಗಿಸುತ್ತಿದೆ. ಹಾಗಾದರೆ, ಮಹಾರಾಷ್ಟ್ರದ ಯೋಜನೆಗೆ ಇದೇ ಮಾನದಂಡ ಅನ್ವಯಿಸಬೇಕಲ್ಲವೇ?
ಕರ್ನಾಟಕದ ಜಲಹಕ್ಕುಗಳು, ಆಲಮಟ್ಟಿ ಯೋಜನೆ ಮತ್ತು ರೈತರ ಹಿತಾಸಕ್ತಿಯನ್ನು ರಕ್ಷಿಸುವುದು ನಮ್ಮ ಆದ್ಯತೆ. ಈ ವಿಚಾರವನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಸಮಗ್ರ ಪರಿಶೀಲನೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಲಾಗುವುದು ಎಂದು ಎಂ.ಬಿ.ಪಾಟೀಲ ಘೋಷಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕನ್ನಡ ಅಂಕಿಗಳ ಬಳಕೆಯಿಂದ ಭಾಷೆ ಉಳಿಸಿ :ಪ.ಗು.ಸಿದ್ದಾಪುರ

ಕನ್ನಡ ಕೇವಲ ಭಾಷೆಯಲ್ಲ ನಮ್ಮ ಬದುಕು-ಸಂಸ್ಕೃತಿ-ಸ್ವಾಭಿಮಾನ

ಅಕ್ರಮ ಕಂಟ್ರಿ ಪಿಸ್ತೂಲ್ ವಶ :ಇಬ್ಬರ ಬಂಧನ

ಹಸಿರು ವಿಜಯಪುರದಿಂದ ಜನರ ಭವಿಷ್ಯ ಉಜ್ವಲವಾಗಲಿದೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕನ್ನಡ ಅಂಕಿಗಳ ಬಳಕೆಯಿಂದ ಭಾಷೆ ಉಳಿಸಿ :ಪ.ಗು.ಸಿದ್ದಾಪುರ
    In (ರಾಜ್ಯ ) ಜಿಲ್ಲೆ
  • ಕನ್ನಡ ಕೇವಲ ಭಾಷೆಯಲ್ಲ ನಮ್ಮ ಬದುಕು-ಸಂಸ್ಕೃತಿ-ಸ್ವಾಭಿಮಾನ
    In (ರಾಜ್ಯ ) ಜಿಲ್ಲೆ
  • ಅಕ್ರಮ ಕಂಟ್ರಿ ಪಿಸ್ತೂಲ್ ವಶ :ಇಬ್ಬರ ಬಂಧನ
    In (ರಾಜ್ಯ ) ಜಿಲ್ಲೆ
  • ಹಸಿರು ವಿಜಯಪುರದಿಂದ ಜನರ ಭವಿಷ್ಯ ಉಜ್ವಲವಾಗಲಿದೆ
    In (ರಾಜ್ಯ ) ಜಿಲ್ಲೆ
  • ಚಡಚಣ ಬಂದ್‌ಗೆ ಸಂಪೂರ್ಣ ಬೆಂಬಲ; ಪಟ್ಟಣ ಸ್ತಬ್ಧ!
    In (ರಾಜ್ಯ ) ಜಿಲ್ಲೆ
  • ದಾಖಲೆ ಬರೆದ ವಿಜಯಪುರ ಪೊಲೀಸರು; ಸಂತ್ರಸ್ತರಿಗೆ ಸ್ವತ್ತು ಹಸ್ತಾಂತರ
    In (ರಾಜ್ಯ ) ಜಿಲ್ಲೆ
  • ನನಗೂ ಡಿಜಿಟಲ್ ಅರೆಸ್ಟ್ ಮಾಡಲು ಮುಂದಾಗಿದ್ದರು!
    In (ರಾಜ್ಯ ) ಜಿಲ್ಲೆ
  • ನಾಡಿನ ಜಲಹಕ್ಕುಗಳೊಂದಿಗೆ ಖಂಡಿತ ರಾಜಿ ಇಲ್ಲ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧೀಜಿ ಚಿಂತನೆಗಳು ಇಂದಿಗೂ ಪ್ರಸ್ತುತ
    In (ರಾಜ್ಯ ) ಜಿಲ್ಲೆ
  • ರಾಮಾಯಣ ಮಾನವನ ಬದುಕಿಗೆ ದಾರಿದೀಪ :ಬಸನಗೌಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.