ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಬ್ಬಿಗೆ ರೂ ೫೫೦೦ ರೂ ನೀಡಬೇಕೆಂದ್ರ ಆಗ್ರಹಿಸಿ ರೈತರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳು ತಾಲೂಕಿನ ಹಿರೇ ಮಸಳಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಂದ ನಿಮಿತ್ಯ ಅಂಗಡಿ ಮುಗ್ಗಟ್ಟು ತೆಗೆಯಲಿಲ್ಲ. ಶಾಲೆ ಗಳು ಮತ್ತು ಬಸ್ಸ ಸಂಚಾರ ಬಂದ ಆಗಿದ್ದವು. ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ರೈತ ಮುಖಂಡ ಮತ್ತು ಕರವೇ ಅಧ್ಯಕ್ಷ ಶಿವು ಮಲಕಗೊಂಡ, ಮಿಲಿಂದ ಹೊಸಮನಿ, ಅದೃಷ್ಟಪ್ಪಾ ವಾಲಿ, ಮೌಲಾಸಾಬ ಸೌದಾಗರ ಮಾತನಾಡಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವಲ್ಲಿ ಸರಕಾರ ಮತ್ತು ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷ ತೋರುತ್ತಿವೆ. ಸಕ್ಕರೆ ಕಾರ್ಖಾನೆಗಳು ರೂ ೪೫೦೦ ಮತ್ತು ರಾಜ್ಯ ಸರಕಾರ ೧೦೦೦ ರೂ ಸೇರಿ ಒಟ್ಟು ೫೫೦೦ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುನೀಲ ದೊಡಮನಿ, ಶರಣು ಹತ್ತಿ, ಮಲ್ಲೇಶಗೌಡ ಪಾಟೀಲ,ಪುಂಡಲೀಕ ಕಪಾಲಿ, ರವಿ ರಾಜಿ, ಶಮೀರ ತಾಂಬೋಳಿ , ಶರಣ ಬಸು ಮೇತ್ರಿ, ಸಿದ್ದನಗೌಡ ಪಾಟೀಲ ಹಣಮಂತ ಮೇತ್ರಿ ಮತ್ತಿತರಿದ್ದರು.
ಬೆಳಗ್ಗೆ ೧೦ ಗಂಟೆಗೆ ಎಲ್ಲ ಅಂಗಡಿಗಳು ಮುಚ್ಚಿದ್ದವು. ಮತ್ತು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಂದ ಮಾಡಲಾಗಿತ್ತು. ಯಾವದೇ ಬಸ್ಸಿನ ಸೌಕರ್ಯ ಇರಲಿಲ್ಲ. ಇದರಿಂದ ಬೇರೆ ಊರಿಗೆ ಹೋಗುವವರು ಪರದಾಡ ಬೇಕಾಯಿತು. ಇಂಡಿಯ ಕಂದಾಯ ಇಲಾಖೆ ಉಪ ತಹಸೀಲ್ದಾರ ಎಸ್.ಆರ್ ಮುಜಗೊಂಡ ಇವರಿಗೆ ಮನವಿ ಅರ್ಪಿಸಲಾಯಿತು.

