ಬೆಂಗಳೂರಿನ ಯೂತ್ ಫೋಟೋಗ್ರಫಿ ಸೋಸೈಟಿ ಆಯೋಜಿಸಿದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ
ವಿಜಯಪುರ: ನಗರದ ಯುವ ಛಾಯಾಗ್ರಾಹಕ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಸತೀಶ ಕಲಾಲ ಅವರಿಗೆ ಬೆಂಗಳೂರಿನ ಯೂತ್ ಫೋಟೋಗ್ರಫಿ ಸೋಸೈಟಿಯು ಆಯೋಜಿಸಿದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಪ್ಪು ಬಿಳುಪು ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಬಹುಮಾನಕ್ಕೆ ಭಾಜನರಾಗಿ ನಮ್ಮ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಹರ್ಷ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಸತೀಶ ಕಲಾಲ ಅವರು, ಈ ಬಾರಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದವರಾಗಿದ್ದು ಇವರು ಕ್ಲಿಕ್ಕಿಸಿದ ಗ್ರಾಮಿಣ ಭಾಗದಲ್ಲಿ ಅಣ್ಣ ತಂಗಿಯರು ಸಂತೋಷದಿಂದ ಆಟವಾಡುತಿದ್ದ ಛಾಯಾಚಿತ್ರವನ್ನು ದೃಶ್ಯ ಸಂಯೋಜನೆ, ನೆರಳು ಬೆಳಕಿನ ಸಂಯೋಜನೆಯ ಕೌಶಲಗಳನ್ನು ಹೊಂದಿದ ಚಿತ್ರಕ್ಕೆ ಚಿನ್ನದ ಪದಕ ದೊರೆತಿದೆ.
ಇಟಲಿ, ಟರ್ಕಿ, ಸೌದಿ, ಜರ್ಮನಿ ಸಹಿತ ಭಾರತದ ಶ್ರೇಷ್ಠ ಛಾಯಾಗ್ರಾಹಕರು ಈ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಸತೀಶ ಕಲಾಲ ಅವರ ಛಾಯಾಚಿತ್ರಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಬಂಗಾರದ ಪದಕಕ್ಕೆ ಆಯ್ಕೆಮಾಡಿದ್ದಾರೆ.
ಬಂಗಾರದ ಪದಕಕ್ಕೆ ಭಾಜನರಾದ ಸತೀಶ ಕಲಾಲ ಅವರಿಗೆ ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಸ್.ನಾಗರಾಜ ಮತ್ತು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ, ಉಪಾಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ, ಖಜಾಂಚಿ ಸುರೇಶ ರಾಠೋಡ, ನಿರ್ದೇಶಕರಾದ ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ ಛಾಯಾಗ್ರಾಹಕರಾದ ಅನಂತ ಭೋಸಲೆ, ಸೂಗುರೇಶ ಗಲ್ಪಿ ಅಭಿನಂದಿಸಿದ್ದಾರೆ.