ಸಿಂದಗಿ: ನಗರದ ಪ್ರಶಾಂತ ಚಿತ್ರಮಂದಿರದಲ್ಲಿ ಇಂದು ರಾಜ್ಯಾದ್ಯಂತ ತೆರೆಕಂಡ ಸೈಕಲ್ ಸವಾರಿ ಚಿತ್ರಕ್ಕೆ ರಿಬನ್ ಕಟ್ ಮಾಡುವ ಮೂಲಕ ಮಾಜಿ ಶಾಸಕ ಶರಣಪ್ಪ ಸುಣಗಾರ ಚಾಲನೆ ನೀಡಿದರು
ಚಿತ್ರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳನ್ನು ಹೊಂದಿರುವ ಈ ಚಿತ್ರವು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ, ಹಾಗೂ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದ ನಟ ಶಿವಾಜಿ ಮೆಟಗಾರ, ಉದ್ದಿಮೆದಾರ ಸಂತೋಷ ದೊಡಮನಿ, ಜಿಲ್ಲಾ DSS ಸಂಚಾಲಕ ವಾಯ್.ಸಿ.ಮಯೂರ, ಹೋರಾಟಗಾರರಾದ ಡಾ.ದಸ್ತಗೀರ.ಇಂಗಳಗಿ, ಮಡಿವಾಳ ನಾಯ್ಕೋಡಿ, ಡಾ.ರಾಜಶೇಖರ ನರಗೋದಿ, ಶಂಕರಲಿಂಗ ಬೂದಿಹಾಳ, ಪೀರು ಕೇರೂರ, ದೊಡ್ಡಪ್ಪ ಮುದನೂರ, ನೀಲಕಂಠ ಚಲವಾದಿ ಸೇರಿದಂತೆ ಅನೇಕ ಪ್ರೇಕ್ಷಕರಿದ್ದರು.
Related Posts
Add A Comment