ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನೆಲೆ ಪ್ರಕಾಶನ ಸಂಸ್ಥೆ ಅಡಿಯಲ್ಲಿ ಸ್ಥಾಪಿಸಲಾಗಿರುವ “ಚನ್ನಪ್ಪ ಕಟ್ಟಿ ಪ್ರತಿಷ್ಠಾನ”ದಿಂದ ಈ ವರ್ಷದ ‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ಗೆ 2026ನೆಯ ಸಾಲಿನಲ್ಲಿ ಪ್ರಕಟಗೊಂಡ ಕಥಾ ಪ್ರಕಾರದ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಕತೆಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಯಾದ ಕೃತಿಗೆ ಹನ್ನೊಂದು ಸಾವಿರ ರೂಪಾಯಿ ಮೊತ್ತ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
ಪ್ರಕಟಿತ ಮೂರು ಪ್ರತಿಗಳನ್ನು ದಿನಾಂಕ 20 ನವೆಂಬರ್ 2026 ರೊಳಗೆ ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
ಡಾ. ಎಂ ಎಂ ಪಡಶೆಟ್ಟಿ
ಸಂಚಾಲಕರು,
“ಚನ್ನಪ್ಪ ಕಟ್ಟಿ ಪ್ರತಿಷ್ಠಾನ”
ಗುರುಬಸವ
ವಿದ್ಯಾನಗರ, ವಾಟರ್ ಟ್ಯಾಂಕ್ ಹತ್ತಿರ ಸಿಂದಗಿ -586128
ದೂ: 9620007518
ವಿಜಯಪುರ ಜಿಲ್ಲೆ.

