ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಅಂತಿಮ ಮತದಾರರ ಪಟ್ಟಿ ಪ್ರಕಟ | -ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅ.೨೭ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೮,೬೯,೧೪೯ ಪುರುಷರು, ೮,೩೮,೭೬೮ ಮಹಿಳೆಯರು ಹಾಗೂ ೧೮೨ ಇತರೆ ಸೇರಿದಂತೆ ಒಟ್ಟು ೧೭,೦೮,೦೯೯ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅವರು ತಿಳಿಸಿದ್ದಾರೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಪ್ರಕ್ರಿಯೆಯಡಿ ಆಗಸ್ಟ್ ೨೪ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಪಟ್ಟಿ ಪ್ರಕಟಿಸಿದ ನಂತರ ಆಗಸ್ಟ್ ೨೪ರಿಂದ ಅಕ್ಟೋಬರ್ ೨೨ರವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕ್ಷೇತ್ರವಾರು ಮತದಾರರ ವಿವರ:
ಅಂತಿಮ ಮತದಾರರ ಪಟ್ಟಿಯನ್ವಯ ೨೬-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ೯೮,೫೪೮ ಪುರುಷರು, ೯೬,೭೧೩ ಮಹಿಳೆಯರು ಹಾಗೂ ೨೫ ಇತರೆ ಮತದಾರರು ಸೇರಿದಂತೆ ಒಟ್ಟು ೧,೯೫,೨೮೬ ಮತದಾರರಿದ್ದಾರೆ. ೨೭-ದೇವರಹಿಪ್ಪರಗಿಕ್ಷೇತ್ರದಲ್ಲಿ ೧,೦೪,೦೦೫ ಪುರುಷರು, ೯೮,೬೨೬ ಮಹಿಳೆಯರು ಹಾಗೂ ೨೭ ಇತರೆ ಮತದಾರರು ಸೇರಿದಂತೆ ಒಟ್ಟು ೨,೦೨,೬೫೮ ಮತದಾರರಿದ್ದಾರೆ. ೨೮-ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ೧,೦೦,೮೨೨ ಪುರುಷರು, ೯೮,೮೪೨ ಮಹಿಳೆಯರು ಹಾಗೂ ೨೧ ಇತರೆ ಮತದಾರರು ಸೇರಿದಂತೆ ಒಟ್ಟು ೧,೯೯,೬೮೫ ಮತದಾರರಿದ್ದಾರೆ.
೨೯-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ೧,೦೩,೮೧೨ ಪುರುಷರು, ೧,೦೦,೧೩೧ ಮಹಿಳೆಯರು ಹಾಗೂ ೯ ಇತರೆ ಮತದಾರರು ಸೇರಿದಂತೆ ಒಟ್ಟು ೨,೦೩,೯೫೨ ಮತದಾರರಿದ್ದಾರೆ. ೩೦-ಬಿಜಾಪುರ ನಗರ ಕ್ಷೇತ್ರದಲ್ಲಿ ೧,೦೪,೧೫೮ ಪುರುಷರು, ೧,೦೮,೮೬೯ ಮಹಿಳೆಯರು ಹಾಗೂ ೪೧ ಇತರೆ ಮತದಾರರು ಸೇರಿದಂತೆ ಒಟ್ಟು ೨,೧೩,೦೬೮ ಮತದಾರರಿದ್ದಾರೆ. ೩೧-ನಾಗಠಾಣ ಮತಕ್ಷೇತ್ರದಲ್ಲಿ ೧,೨೪,೬೮೨ ಪುರುಷರು, ೧,೧೭,೮೫೫ ಮಹಿಳೆಯರು ಹಾಗೂ ೧೨ ಇತರೆ ಮತದಾರರು ಸೇರಿದಂತೆ ಒಟ್ಟು ೨,೪೨,೫೪೯ ಮತದಾರರಿದ್ದಾರೆ.
೩೨-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೯,೦೧೯ ಪುರುಷರು, ೧,೧೦,೪೩೮ ಮಹಿಳೆಯರು ಹಾಗೂ ೨೨ ಇತರೆ ಮತದಾರರು ಸೇರಿದಂತೆ ಒಟ್ಟು ೨,೨೯,೪೭೯ ಮತದಾರರಿದ್ದಾರೆ. ೩೩-ಸಿಂದಗಿ ಮತಕ್ಷೇತ್ರದಲ್ಲಿ ೧,೧೪,೧೦೩ ಪುರುಷರು, ೧,೦೭,೨೯೪ ಮಹಿಳೆಯರು ಹಾಗೂ ೨೫ ಇತರೆ ಮತದಾರರು ಸೇರಿದಂತೆ ಒಟ್ಟು ೨,೨೧,೪೨೨ ಮತದಾರರಿದ್ದಾರೆ. ಈ ಮೂಲಕ ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು ೧೭,೦೮,೦೯೯ ಮತದಾರರಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಭಾವಚಿತ್ರ ಸಹಿತ ಹಾರ್ಡ್ ಪ್ರತಿ ಹಾಗೂ ಭಾವಚಿತ್ರ ರಹಿತ ಸಾಫ್ಟ್ ಪ್ರತಿಗಳನ್ನು ವಿತರಿಸಲಾಗಿದೆ.
ಸಾರ್ವಜನಿಕರು ಚುನಾವಣಾ ಆಯೋಗದ ಅಧಿಕೃತ ಜಾಲತಾಣ voಣeಡಿs.eಛಿi.gov.iಟಿ ಚುನಾವಣಾ ಆಯೋಗದ ಇಅIಓಇಖಿ ಅಪ್ಲಿಕೇಶನ್ ಮೂಲಕ ಹಾಗೂ ಜಿಲ್ಲೆಯ ವೆಬ್ ಪೋರ್ಟಲ್ hಣಣಠಿs://viರಿಚಿಥಿಚಿಠಿuಡಿಚಿ.ಟಿiಛಿ.iಟಿ/eಟಿ ಮೂಲಕ ಅಂತಿಮ ಮತದಾರರ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
ಚುನಾವಣಾ ಆಯೋಗದ ನಿಯಮದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಿರಂತರವಾಗಿ ನಡೆಯುವುದರಿಂದ, ಅರ್ಹ ನಾಗರಿಕರು ತಮ್ಮ ಹೆಸರು ಸೇರ್ಪಡೆ ಹಾಗೂ ಅಗತ್ಯ ತಿದ್ದುಪಡಿಗಳಿಗಾಗಿ ನಿಯಮಾನುಸಾರ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಚುನಾವಣಾ ಆಯೋಗದ ಅಧಿಕೃತ ಮತದಾರರ ಸೇವಾ ಪೋರ್ಟಲ್ voಣeಡಿs.eಛಿi.gov.iಟಿ ಚುನಾವಣಾ ಆಯೋಗದ ಇಅIಓಇಖಿ ಅಪ್ಲಿಕೇಶನ್ ಮೂಲಕ, ಮತಗಟ್ಟೆ ಮಟ್ಟದ ಅಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ-ಮತದಾರರ ನೋಂದಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

