Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ

ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ

ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ
(ರಾಜ್ಯ ) ಜಿಲ್ಲೆ

ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ದೇವರಹಿಪ್ಪರಗಿಯಲ್ಲಿ ಸತತ ಐದು ದಿನಗಳಿಂದ ನಡೆದ ಅದ್ಧೂರಿ ಜಾತ್ರೆೆ | ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರು

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಸತತ ಐದು ದಿನಗಳಿಂದ ನಡೆದ ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ಮದ್ಯೆ ಮಂಗಳವಾರ ಸಂಪನ್ನವಾಯಿತು.
ಪಟ್ಟಣದ ಹೊರವಲಯದಲ್ಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಶುಕ್ರವಾರದಂದು ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮದ್ಯೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ನಾಡಿನ ಹಾಗು ಮಹಾರಾಷ್ಟ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.
ಬೆಳಿಗ್ಗೆ ೦೭.೦೦ ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತಾಧಿಗಳು ಭಕ್ತಿಯೊಂದಿಗೆ ಭಂಡಾರ ಎಸೆದು ‘ಏಳುಕೋಟಿ-ಏಳುಕೋಟಿ ಗೇ’ ಎಂಬ ಜಯಕಾರದೊಂದಿಗೆ ಭಕ್ತಿ ಸಮರ್ಪಿಸಿದರು.
ಜಾತ್ರೆಯಲ್ಲಿ ಪಟ್ಟಣದ ಜನರು ಐದು ದಿನಗಳ ವರೆಗೆ ತಮ್ಮ ಕೆಲಸ ಕರ‍್ಯಗಳನ್ನು ಬದಿಗೊತ್ತಿ, ಪ್ರತಿದಿನ ಪೂಜಾ ಕರ‍್ಯ ಸಾಂಸ್ಕೃತಿಕ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರಗು ತಂದರು.
ಜಾತ್ರೆಯ ಅಂಗವಾಗಿ ಗೆಳೆಯರ ಬಳಗದಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಸಂಗ್ರಾಣಿ ಕಲ್ಲು ಹಾಗೂ ಭಾರ ಎತ್ತುವ ಸ್ಪರ್ಧೆಗಳು, ರಸಮಂಜರಿ ಕಾರ್ಯಕ್ರಮಗಳು ಜರುಗಿದವು.
ಆದರೆ ಕಳೆದ ೨೦-೩೦ ವರ್ಷಗಳ ಹಿಂದೆ ಕೇವಲ ಪ್ರಸಾದ ರೂಪದಲ್ಲಿ ಹಣೆಗೆ ಮಾತ್ರ ಧರಿಸುತ್ತಿದ್ದ ಭಂಡಾರ ಇಂದು ಎಲ್ಲೆಂದರಲ್ಲಿ ಎರಚುವ ಬಣ್ಣವಾಗಿ ಜಾತ್ರೆಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದ್ದು ಸುಶಿಕ್ಷಿತರು ಜಾತ್ರೆಯನ್ನೂ ದೂರದಿಂದ ಕಾಣುವಂತಾಯಿತು. ಈ ಕುರಿತು ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂಬ ಮಾತುಗಳು ದೂರದ ನಗರ ಪಟ್ಟಣಗಳಿಂದ ಬಂದ ಭಕ್ತರಿಂದ ಕೇಳಿ ಬಂದವು.

ಉಚಿತ ಅನ್ನಪ್ರಸಾದ

ಪಟ್ಟಣದ ಹಲವಾರು ಯುವಕ ಸಂಘಗಳು ವ್ಯಾಪಾರಸ್ತರು, ಸ್ವಯಂಪ್ರೇರಣೆಯಿಂದ ದೇವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿಯ ಹತ್ತಿರ ಉಚಿತ ಅನ್ನಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಜಾತ್ರೆಯುದ್ದಕ್ಕೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ ವಹಿಸಿದ್ದರಿಂದ ಯಾವುದೆ ಅಹಿತಕರ ಘಟನೆಗಳು ನಡೆಯದೆ ಶಾಂತಿಯಿಂದ ಮುಕ್ತಾಯಗೊಂಡ ಜಾತ್ರೆ ಜನಸಮೂಹದ ತುಂಬು ಪ್ರಶಂಸೆಗೆ ಪಾತ್ರವಾಯಿತು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ

ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ

ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ

ರೂ.1.07 ಕೋಟಿ ಮೌಲ್ಯದ 537 ಮೊಬೈಲ್‌ಗಳ ಪತ್ತೆ!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೂ.1.07 ಕೋಟಿ ಮೌಲ್ಯದ 537 ಮೊಬೈಲ್‌ಗಳ ಪತ್ತೆ!
    In (ರಾಜ್ಯ ) ಜಿಲ್ಲೆ
  • ನ.೫ ರಂದು ಹೆದ್ದಾರಿ ಬಂದ್ ಗೆ ನಂದಿ ಸೇನೆ ಯೋಚನೆ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಬಗ್ಗೆ ಖರ್ಗೆ ಪದ ಪ್ರಯೋಗ ಸರಿಯಲ್ಲ
    In (ರಾಜ್ಯ ) ಜಿಲ್ಲೆ
  • ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವುದು ತಾಯಂದಿರ ಹೊಣೆ :ಅಮೃತಾ
    In (ರಾಜ್ಯ ) ಜಿಲ್ಲೆ
  • ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೧೭,೦೮,೦೯೯ ಮತದಾರರು
    In (ರಾಜ್ಯ ) ಜಿಲ್ಲೆ
  • ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.