Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ

ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ

ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ
(ರಾಜ್ಯ ) ಜಿಲ್ಲೆ

ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭತಗುಣಕಿಯಲ್ಲಿ ಕರ್ನಾಟಕ–ಮಹಾರಾಷ್ಟ್ರದ ಪೈಲ್ವಾನರಿಂದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ

ಉದಯರಶ್ಮಿ ದಿನಪತ್ರಿಕೆ

ಚಡಚಣ: ಕುಸ್ತಿ ನಮ್ಮ ದೇಶದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಔಷಧಿಯಿದ್ದಂತೆ. ಇಂತಹ ಕ್ರೀಡೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಜೈಭವಾನಿ ಜಾತ್ರಾ ಕಮಿಟಿಯ ಕುಸ್ತಿ ಅಧ್ಯಕ್ಷ ಶಹಾಜಿ ಮಿಸಾಳೆ ಅಭಿಪ್ರಾಯಪಟ್ಟರು.
ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದಲ್ಲಿ ಜೈಭವಾನಿ ಜಾತ್ರಾ ಮಹೋತ್ಸವದ ನಿಮಿತ್ತ ಜೈಭವಾನಿ ಜಾತ್ರಾ ಕಮಿಟಿ ಅಧ್ಯಕ್ಷ ರುಕ್ಮುದ್ದಿನ್ ತದ್ದೇವಾಡಿ ಹಾಗೂ ಕುಸ್ತಿ ಅಧ್ಯಕ್ಷ ಶಹಾಜಿ ಮಿಸಾಳೆ ಅವರ ಸಹಯೋಗದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಪ್ರಸಿದ್ಧ ಪೈಲ್ವಾನರಿಂದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಹಾಜಿ ಮಿಸಾಳೆ, ಕುಸ್ತಿ ಕೇವಲ ಮನರಂಜನೆಯ ಕ್ರೀಡೆಯಲ್ಲ. ಅದು ಶಿಸ್ತು, ಸಂಯಮ, ದೈಹಿಕ ಬಲ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಕ್ರೀಡೆಯಾಗಿದೆ. ಯುವಕರು ಇಂತಹ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಆರೋಗ್ಯವಂತ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಮಾತನಾಡಿ, ಕುಸ್ತಿ ಅಭ್ಯಾಸ ಮಾಡುವುದು ಸುಲಭದ ಮಾತಲ್ಲ. ವರ್ಷಾನುಗಟ್ಟಲೆ ಕಠಿಣ ಪರಿಶ್ರಮ ಪಟ್ಟು, ದೇಹದ ಸಮತೋಲನ ಕಾಪಾಡಿಕೊಂಡು, ನಿರಂತರ ಅಭ್ಯಾಸದ ಮೂಲಕ ದೇಹವನ್ನು ಸದೃಢಗೊಳಿಸಿದಾಗ ಮಾತ್ರ ಒಬ್ಬ ಸಮರ್ಥ ಪೈಲ್ವಾನನಾಗಲು ಸಾಧ್ಯ ಎಂದರು.
ಇಂದಿನ ಯುವಜನರು ಮೊಬೈಲ್ ಬಳಕೆ, ಗುಟ್ಕಾ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯದ ಮಹತ್ವವನ್ನು ಮರೆತು ದೇಹವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಕರನ್ನು ಇಂತಹ ದುಶ್ಚಟಗಳಿಂದ ದೂರವಿಟ್ಟು ಸಾಂಪ್ರದಾಯಿಕ ಕ್ರೀಡೆಗಳತ್ತ ಆಕರ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ಕುಸ್ತಿ ಎಂದರೇನು ಎಂಬುದನ್ನು ತಿಳಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.
ಪ್ರತಿ ಗ್ರಾಮದಲ್ಲಿಯೂ ಗರಡಿ ಮನೆಗಳನ್ನು ನಿರ್ಮಿಸಿ, ಯುವಕರಿಗೆ ಕುಸ್ತಿ ಅಭ್ಯಾಸ ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಿದರೆ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಂ. ಕೋರೆ, ಜೆಟ್ಟೆಪ್ಪ ರವಳಿ, ರಣಜಿತ ಬಾಬರ, ಭರತ ಬಾಬರ, ಶಿವಪತ್ರ ಜೇವೂರಗಿ, ಲಕ್ಷ್ಮೀಕಾಂತ ಮೇತ್ರಿ, ಭೀಮಣ್ಣ ಕವಲಿ, ಸತೀಶ ಹತ್ತಿ, ಅಪ್ಪಾಸಾಹೇಬ ಹಾವಿನಾಳ, ಸುರೇಶ ಬಾಬರ, ವಿಜು ಶಿಂಧೆ, ಅಶೋಕ ಜಾಧವ, ಶಿವಾಜಿ ಶಿಂಧೆ, ಸುರೇಶ ಮುಜಗೊಂಡ, ಕೃಷ್ಣಾ ಕರಾಡೆ, ಧನಾಜಿ ಮಸ್ಕೆ, ಬಸವರಾಜ ಶೆಡಬಾಳ ಸೇರಿದಂತೆ ಜಾತ್ರಾ ಕಮಿಟಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ

ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ

ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ

ರೂ.1.07 ಕೋಟಿ ಮೌಲ್ಯದ 537 ಮೊಬೈಲ್‌ಗಳ ಪತ್ತೆ!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ‘ಚನ್ನಪ್ಪ ಕಟ್ಟಿ ಕಥಾ ಪ್ರಶಸ್ತಿ’ ಗೆ ಕಥಾ ಸಂಕಲನಗಳ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಭಾರತೀಯ ವಿಜ್ಞಾನ ತಂತ್ರಜ್ಞಾನ ಮಹೋತ್ಸವಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಆವರಿಸಿದೆ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೂ.1.07 ಕೋಟಿ ಮೌಲ್ಯದ 537 ಮೊಬೈಲ್‌ಗಳ ಪತ್ತೆ!
    In (ರಾಜ್ಯ ) ಜಿಲ್ಲೆ
  • ನ.೫ ರಂದು ಹೆದ್ದಾರಿ ಬಂದ್ ಗೆ ನಂದಿ ಸೇನೆ ಯೋಚನೆ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಬಗ್ಗೆ ಖರ್ಗೆ ಪದ ಪ್ರಯೋಗ ಸರಿಯಲ್ಲ
    In (ರಾಜ್ಯ ) ಜಿಲ್ಲೆ
  • ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವುದು ತಾಯಂದಿರ ಹೊಣೆ :ಅಮೃತಾ
    In (ರಾಜ್ಯ ) ಜಿಲ್ಲೆ
  • ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೧೭,೦೮,೦೯೯ ಮತದಾರರು
    In (ರಾಜ್ಯ ) ಜಿಲ್ಲೆ
  • ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.