ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಂಸ್ಕೃತಿ, ಸಂಸ್ಕಾರ, ಭಕ್ತಿ ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಮೌಲ್ಯಗಳನ್ನು ಒಳಗೊಂಡಿರುವುದು ಹಿಂದೂ ಸನಾತನ ಧರ್ಮ ಎಂದು ಮಹಿಳಾ ಮುಖಂಡೆ ಅಮೃತಾ ರಾ. ಕಾಪಸೆ ಹೇಳಿದರು.
ಝಳಕಿಯ ಜೈ ಅಂಬಾ ಭವಾನಿ ನವ ತರುಣ ಮಂಡಳಿಯ ವತಿಯಿಂದ ಆಯೋಜಿಸಿದ್ದ ಶ್ರೀ ರೇಣುಕಾ ಯಲ್ಲಮ್ಮನ ಮಹಾತ್ಮೆ ಎಂಬ ಭಕ್ತಿಪ್ರಧಾನ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೂ ಸನಾತನ ಧರ್ಮದಲ್ಲಿ ಭಕ್ತಿಗೆ ವಿಶೇಷ ಸ್ಥಾನವಿದೆ. ದಾರಿಯಲ್ಲಿ ಕಾಣುವ ಕಲ್ಲಿಗೂ ಬಣ್ಣ, ಸುಣ್ಣ ಹಚ್ಚಿ ದೇವರೆಂದು ಭಾವಿಸಿ ಪೂಜಿಸುವ ಭಕ್ತಿಭಾವ ನಮ್ಮ ಧಾರ್ಮಿಕ ಸಂಸ್ಕೃತಿಯ ಭಾಗವಾಗಿದೆ. ಗುರುಹಿರಿಯರನ್ನು ಗೌರವದಿಂದ ಕಾಣುವುದು, ಭಕ್ತಿಯಿಂದ ನಡೆದುಕೊಳ್ಳುವುದು ಹಾಗೂ ನವರಾತ್ರಿಯ ಒಂಬತ್ತು ದಿನಗಳ ಕಾಲ ಮಹಿಳೆಯರು ನಾಡದೇವಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವುದು ನಮ್ಮ ಧಾರ್ಮಿಕ ಪರಂಪರೆಯ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ಮಹಿಳಾ ಮುಖಂಡೆ ಅಶ್ವಿನಿ ಪ. ಪಾಟೀಲ ಮಾತನಾಡಿದರು.
ಶ್ರೀಮತಿ ಮಹಾನಂದಾ ಹಿರೇಮಠ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಹಾನಂದ ಸ. ಹಿರೇಮಠ, ಸುನೀತಾ ಪಾ. ಜಹಾಗೀರದಾರ, ಸ್ನೇಹಾ ಶ. ಪಾಟೀಲ, ಸುಷ್ಮಾ ವಿ. ಶಿರಶ್ಯಾಡ, ಶೀಲಾ ಸು. ಹೂಗಾರ, ಲಲತಾ ಕೋಳಿ, ರಾಜೇಶ್ವರಿ ರಾ. ತೇಲಿ, ಮಲ್ಲಮ್ಮ ಸ. ಚಿತ್ರಗಾರ, ಮಲ್ಲಮ್ಮ ಗ. ಮಡಿವಾಳ, ಮಹಾನಂದಾ ಅ. ಬಿರಾದಾರ, ಜ್ಯೋತಿ ಸ. ಡೋಳಿ, ಕುಮಾರಿ ವೈಷ್ಣವಿ ಹೂಗಾರ, ಐಶ್ವರ್ಯ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅನಿತಾ ರಾ. ವಾಘಮೋರೆ ಕಾರ್ಯಕ್ರಮ ನಿರೂಪಿಸಿದರು.

