ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬಾಪುಗೌಡ ಮಡಿವಾಳಪ್ಪಗೌಡ ಪಾಟೀಲ್ (ಕಣ್ಣಗುಡ್ಡಿಹಾಳ) ಅವರಿಗೆ ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಗೌರವ ಲಭಿಸಿದೆ.
ಶ್ರೀ ಅಪ್ಪಾಜಿ ಶಿಕ್ಷಣ ಸಂಸ್ಥೆ ಹಾಗೂ ಆಕ್ಸಫರ್ಡ್ ಹಾಗೂ ಬಿ ಎಂ ಪಾಟೀಲ ಸಮೋಹ ಶಿಕ್ಷಣ ಸಂಸ್ಥೆ ಗುಬ್ಬೇವಾಡ ತಾ. ಸಿಂದಗಿ ಹಾಗೂ ಮುದ್ದೇಬಿಹಾಳ ದ ಅಧ್ಯಕ್ಷರಾಗಿರುವ ಬಾಪುಗೌಡ ಮಡಿವಾಳಪ್ಪಗೌಡ ಪಾಟೀಲ (ಕಣ್ಣಗುಡ್ಡಿಹಾಳ) ಅವರು ಶೈಕ್ಷಣಿಕ ರಂಗದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ತುಮಕೂರಿನ ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿಯನ್ನು ಕೊಡಮಾಡಲಾಗಿದೆ.
ನವೆಂಬರ್ ೦೫ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ಜನ್ಮ ಜಯಂತಿ ಸಮಾರಂಭದಲ್ಲಿ ಶ್ರೀಯುತರಿಗೆ ಈ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದೆಂದು ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

