ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಹಿಂದೂ ಧರ್ಮದ ಪವಿತ್ರ ಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ದೇಶಿ ಸಾಹಿತ್ಯದ ಶ್ರೇಷ್ಠ ಸಂತ.ಈ ಆದಿಕವಿ ಭಾರತೀಯರ ಹೃದಯದಲ್ಲಿ ಸದಾ ಆಜರಾಮರಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು.
ಸ್ಥಳೀಯ ರಾವಬಹದ್ದೂರ ಡಾ. ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿಯವರ ಭಕ್ತಿ ತಪಸ್ಸಿನ ಮಾರ್ಗ ಮಾನವೀಯತೆಯ ಮೌಲ್ಯವನ್ನು ಸಾರುತ್ತವೆ. ಅವು ಜ್ಞಾನ, ಕರುಣೆ, ನೀತಿ,ನಡವಳಿಕೆಯಂಥ ಆದರ್ಶ ಮೌಲ್ಯವನ್ನು ಪ್ರತಿಪಾದಿಸುತ್ತವೆ. ಸಾಹಿತ್ಯ, ಧಾಮಿ೯ಕ, ಸಾಂಸ್ಕೃತಿಕ ಪರಂಪರೆಗಳಿಗೆ ಪುಷ್ಟಿ ನೀಡುತ್ತವೆ. ವಾಲ್ಮೀಕಿ ಜೀವನ ಕಥಾ ಹಂದರ ವಿಶಿಷ್ಟ ಮೌಲ್ಯಗಳಿಂದ ಕೂಡಿವೆ. ಆದಿಕವಿಯ ಜೀವನ ಚರಿತ್ರೆ ಸತ್ಕಾರ್ಯದೊಂದಿಗೆ ಸಾಗಿದ್ದರಿಂದ ದೇವ ಸ್ವರೂಪಿ ವಾಲ್ಮೀಕಿ ಋಷಿ ಮೌಲ್ಯ ಇಂದಿಗೂ ಅಮರಾಗಿವೆ. ಜನಮನದ ಮೇಲೆ ಅಗಾಧ ಪ್ರಭಾವ ಬೀರಿವೆ ಎಂದರು.
ಎಂ.ಎಚ್.ಎಂ.ಪಪೂ ಕಾಲೇಜ್ ಪ್ರಾಚಾರ್ಯ ಎಚ್.ಎನ್.ಕೆಲೂರ, ಹಿರಿಯ ಉಪನ್ಯಾಸಕರಾದ ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ, ಉಪನ್ಯಾಸಕಿ ಮಮತಾ ಕರೆಮುರಗಿ, ಸಹ ಶಿಕ್ಷಕ ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ತಿಮ್ಮಣ್ಣ ದಾಸರ, ಸಿದ್ದು ಪಟ್ಟಣಶೆಟ್ಟಿ, ಆಡುಗೆ ಮಾತೆಯರಾದ ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ ಇತರರಿದ್ದರು.

