Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹರ್ಷಿ ವಾಲ್ಮೀಕಿ ಬದುಕು ಎಲ್ಲರಿಗೂ ಆದರ್ಶ :ಶಿವಲೀಲಾ

ಶೀಗೆ ಹುಣ್ಣಿಮೆ: ಚರಗ ಚೆಲ್ಲಿದ ರೈತ ಮಹಿಳೆಯರು

ವಾಲ್ಮೀಕಿ ಜೀವನದ ಕಥಾ ಹಂದರ ಮೌಲ್ಯದ ಮಂದಿರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾನವೀಯ ಮೌಲ್ಯಗಳೇ ನಮ್ಮ ಧರ್ಮದ ಮೂಲಮಂತ್ರವಾಗಲಿ
(ರಾಜ್ಯ ) ಜಿಲ್ಲೆ

ಮಾನವೀಯ ಮೌಲ್ಯಗಳೇ ನಮ್ಮ ಧರ್ಮದ ಮೂಲಮಂತ್ರವಾಗಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬೇನಾಳದಲ್ಲಿ ದೀಪಸ್ತಂಭದ ಉದ್ಘಾಟನಾ ಸಮಾರಂಭದಲ್ಲಿ ಸಿದ್ಧರೇಣುಕ ಸ್ವಾಮೀಜಿ ಸಲಹೆ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಮಾನವೀಯ ಮೌಲ್ಯಗಳ ಆಧಾರದ ಮೇಲೆ ಧರ್ಮವನ್ನು ಮುನ್ನಡೆಸುವ ಮೂಲಕ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತಿಭೇದ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕು ಎಂದು ಚಿಮ್ಮಲಗಿ ಅರಳಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಸ್ವಾಮೀಜಿ ಹೇಳಿದರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದ ದುರ್ಗಾದೇವಿ (ಮುಚಖಂಡಿ) ದೇವಸ್ಥಾನದಲ್ಲಿ, ಚಿಮ್ಮಲಗಿ ಗ್ರಾಮದ ಜನರು ಕೊಡುಗೆಯಾಗಿ ನೀಡಿದ ಕಲ್ಲಿನಿಂದ ನಿರ್ಮಿಸಿರುವ ೨೧ ಅಡಿ ಎತ್ತರದ ದೀಪಸ್ತಂಭದ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರ ಆಶಯಗಳನ್ನು ಇಂದಿನ ಸಮಾಜವೂ ಅಳವಡಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡ ರಾಮು ಜಗತಾಪ ಮಾತನಾಡಿ, ಬೇನಾಳ ಹಾಗೂ ಚಿಮ್ಮಲಗಿ ಗ್ರಾಮಗಳ ನಡುವಿನ ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧ ಸಾವಿರಾರು ವರ್ಷಗಳಷ್ಟು ಹಳೆಯದು. ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಎರಡೂ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿ, ಪುನರ್ವಸತಿ ಕೇಂದ್ರಗಳಲ್ಲಿ ನೆಲೆಸಿದರೂ, ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಲು ದುರ್ಗಾದೇವಿಯ ಮೇಲಿನ ಭಕ್ತಿಯೇ ಪ್ರಮುಖ ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದ ಮಾದೇಶ ಹಲಗಿ, ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ವಿಜಯಲಕ್ಷ್ಮಿ ಚವ್ಹಾಣ ಹಾಗೂ ಸರ್ವಧರ್ಮ ಸಮಾನತೆಯ ಪ್ರವರ್ತಕ ಚಿಮ್ಮಲಗಿಯ ಕಾಶೀಮಸಾಬ್ (ಬಾಬು) ವಾಲೀಕಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲನಗೌಡ ನರಸನಗೌಡರ, ಶೇಕಣ್ಣ ಸಂಗಣ್ಣವರ, ಮಾಜಿ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣ ಚನಗೊಂಡ, ಹಣಮಂತ ಮಕಾಳಿ, ಅರಳದಿನ್ನಿ ಚಂದ್ರಮ್ಮ ದೇವಿ ದೇವಸ್ಥಾನದ ಧರ್ಮಾಧಿಕಾರಿ ಚಂದ್ರಶೇಖರ ಧರ್ಮರ, ತುಕಪ್ಪಗೌಡ ಬಿರಾದಾರ, ಗುತ್ತಿಗೆದಾರ ಶ್ರೀಶೈಲ ಕೊಂಬೆನ್ನವರ, ಡಾ. ಸಂತೋಷ ಬಸರಕೋಡ, ಬಿ.ಎಚ್. ಗಣಿ, ರಮೇಶ ವಂದಾಲ, ಮಾಜಿ ಗ್ರಾ.ಪಂ. ಸದಸ್ಯ ಎಸ್.ಆರ್. ಬಿರಾದಾರ, ಮಹೇಶ ಆಹಾರ, ಆಹಾರ ನಿರೀಕ್ಷಕ ಹೆಚ್.ಕೆ. ಬಿಳೆಕುದರಿ, ಮಹೇಶ ಇಂಗಳೇಶ್ವರ, ಶರಣಪ್ಪ ಇಂಗಳೇಶ್ವರ, ಅಶೋಕ ತಳವಾರ, ರಮೇಶ ಆಲಮಟ್ಟಿ, ಬೈಲಪ್ಪ ಬಾಗೇವಾಡಿ, ಮಾಜಿ ಗ್ರಾ.ಪಂ. ಸದಸ್ಯ ಬಸಲಿಂಗಪ್ಪ ತಳವಾರ, ಬಾವಾಸಾ ತಳವಾರ, ಶ್ರೀಶೈಲ ಬಡಿಗೇರ, ಮುತ್ತು ಬಡಿಗೇರ, ಮಹೇಶ ಗಾಳಪ್ಪಗೋಳ ಸೇರಿದಂತೆ ಇತರರು ಇದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹರ್ಷಿ ವಾಲ್ಮೀಕಿ ಬದುಕು ಎಲ್ಲರಿಗೂ ಆದರ್ಶ :ಶಿವಲೀಲಾ

ಶೀಗೆ ಹುಣ್ಣಿಮೆ: ಚರಗ ಚೆಲ್ಲಿದ ರೈತ ಮಹಿಳೆಯರು

ವಾಲ್ಮೀಕಿ ಜೀವನದ ಕಥಾ ಹಂದರ ಮೌಲ್ಯದ ಮಂದಿರ

ರಾಮಾಯಣ ಮೂಲಕ ಜೀವನ ಮೌಲ್ಯಗಳ ಸಂದೇಶ ಸಾರಿದ ವಾಲ್ಮೀಕಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹರ್ಷಿ ವಾಲ್ಮೀಕಿ ಬದುಕು ಎಲ್ಲರಿಗೂ ಆದರ್ಶ :ಶಿವಲೀಲಾ
    In (ರಾಜ್ಯ ) ಜಿಲ್ಲೆ
  • ಶೀಗೆ ಹುಣ್ಣಿಮೆ: ಚರಗ ಚೆಲ್ಲಿದ ರೈತ ಮಹಿಳೆಯರು
    In (ರಾಜ್ಯ ) ಜಿಲ್ಲೆ
  • ವಾಲ್ಮೀಕಿ ಜೀವನದ ಕಥಾ ಹಂದರ ಮೌಲ್ಯದ ಮಂದಿರ
    In (ರಾಜ್ಯ ) ಜಿಲ್ಲೆ
  • ಮಾನವೀಯ ಮೌಲ್ಯಗಳೇ ನಮ್ಮ ಧರ್ಮದ ಮೂಲಮಂತ್ರವಾಗಲಿ
    In (ರಾಜ್ಯ ) ಜಿಲ್ಲೆ
  • ರಾಮಾಯಣ ಮೂಲಕ ಜೀವನ ಮೌಲ್ಯಗಳ ಸಂದೇಶ ಸಾರಿದ ವಾಲ್ಮೀಕಿ
    In (ರಾಜ್ಯ ) ಜಿಲ್ಲೆ
  • ಸ್ವಯಂಪ್ರೇರಿತ ರಕ್ತದಾನ ಜೀವ ಉಳಿಸುವ ಮಹಾದಾನ
    In (ರಾಜ್ಯ ) ಜಿಲ್ಲೆ
  • ಚೇತನ ಶಿವಶಿಂಪಿಗೆ ಮತ್ತೊಂದು ಪ್ರಶಸ್ತಿಯ ಗರಿ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಅ.೨೯ಕ್ಕೆ ರಾಜ್ಯಸಭಾ ಸದಸ್ಯ ಎಂ. ನಾಗರಾಜ್ ಅಭಿನಂದನಾ ಸಮಾರಂಭ
    In (ರಾಜ್ಯ ) ಜಿಲ್ಲೆ
  • ಮುಖ್ಯ ಕಾಲುವೆ ನೀರು ಕೊನೆ ಕೆರೆಯವರೆಗೂ ತಲುಪಬೇಕು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.