ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಕ್ತ ಮಾನವನ ಜೀವಕ್ಕೆ ಅತ್ಯಂತ ಅಮೂಲ್ಯ. ಅಫಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ಚಿಕಿತ್ಸೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ವಿಜಯಪುರ ಅಡಿ ಜರುಗಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತವನ್ನು ಕೃತಕವಾಗಿ ಸಂಪೂರ್ಣವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ರಕ್ತದಾನಿಗಳೇ ರಕ್ತದ ಅಗತ್ಯವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಸ್ಥಳೀಯ ಸಿಎಚ್ಸಿ ಆಡಳಿತ ವೈದ್ಯಾಧಿಕಾರಿ ವೀರೇಶ ಹಳ್ಳೂರ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನ ಜೀವ ಉಳಿಸುವ ಮಹಾದಾನವೇನಿಸಿದೆ. ಇಲ್ಲಿ ಯಾವುದೇ ಹಣಕಾಸಿನ ಪ್ರತಿಫಲ ಅಥವಾ ಬಲವಂತವಿಲ್ಲದೆ ಮಾನವೀಯ ಸೇವೆಯ ಮನೋಭಾವದಿಂದ ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತ ನೀಡುವುದಾಗಿದೆ ಎಂದರು.
ಶಿಬಿರದಲ್ಲಿ ದಾನಿಗಳಿಂದ ಒಟ್ಟು ೨೬ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ನಂತರ ಪ್ರಮಾಣಪತ್ರ ವಿತರಿಸಲಾಯಿತು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಆರ್.ಮಾಶಾಳ, ಇಲಾಖೆಯ ಸುಕನ್ಯಾ ಚಳಗೇರಿ, ಕಿರಣ ಪಾಟೀಲ, ಲಕ್ಷ್ಮಿಕಾಂತ ಲಾಲಿ, ರೂಕಿಯಾ ಬಾಗವಾನ, ವಿಜಯಲಕ್ಷ್ಮಿ ದೇವಟಗಿ, ಪ್ರವೀಣಕುಮಾರ ಉಪ್ಪಾರ, ದೇವಸ್ಥಾನ ಸಮಿತಿಯ ಅಧ್ಯಕ್ಷ ವಿನೋದಗೌಡ ಪಾಟೀಲ, ಪ್ರಮೋದ ನಾಡಗೌಡ, ಶಾಂತಪ್ಪ ಬಿರಾದಾರ(ಜಲಕತ್ತಿ), ರಾವುತ ಮೆಟಗಾರ, ಶಂಕರ ಜಮಾದಾರ, ಮಲ್ಲು ನಾಟೀಕಾರ, ಮಲ್ಲು ಜಡಿಮಠ, ಪಿ.ಸಿ.ತಳಕೇರಿ. ಪ್ರವೀಣ ಗುಂದಗಿ ಇದ್ದರು

