ಬಸವನಬಾಗೇವಾಡಿಯಲ್ಲಿ ಬಿಎಲ್‌ಡಿ ಸೌಹಾರ್ದ ಶಾಖೆ ಉದ್ಘಾಟಿಸಿ ಎಂಎಲ್‌ಸಿ ಸುನೀಲಗೌಡ ಸ್ಪಷ್ಠನೆ
ಬಸವನಬಾಗೇವಾಡಿ: ಕಳೆದ ೨೦೨೨, ಅಕ್ಬೋಬರ್ ೭ ರಂದು ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡ ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್ ಸೌಹಾರ್ದ ಸಹಕಾರಿ ಸಂಘವು ಆರು ತಿಂಗಳಲ್ಲಿಯೇ ಜನರ ವಿಶ್ವಾಸ, ಸಹಕಾರದಿಂದಾಗಿ ರೂ. ೧೦೦ ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ನಮ್ಮ ಸೌಹಾರ್ದ ಶಾಖೆಯನ್ನು ಇಡೀ ಉತ್ತರ ಕರ್ನಾಟಕ ವ್ಯಾಪ್ತಿಗೆ ವಿಸ್ತರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಬಿಎಲ್‌ಡಿ ಸೌಹಾರ್ದ ಅಧ್ಯಕ್ಷ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಸಂಕೀರ್ಣದ ಎಸ್‌ಬಿಐ ಬ್ಯಾಂಕ್ ಮೇಲ್ಮಹಡಿ ಕಟ್ಟಡದಲ್ಲಿ ಬುಧವಾರ ಬಿಎಲ್‌ಡಿ ಸೌಹಾರ್ದದ ಶಾಖೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸೌಹಾರ್ದ ಮೇಲೆ ಜನರು ವಿಶ್ವಾಸವಿಟ್ಟು ಪಿಗ್ಮಿ, ಠೇವಣಿ ಇಡುತ್ತಿದ್ದಾರೆ. ನಾವು ಜನರ ವಿಶ್ವಾಸ ಕಳೆದುಕೊಳ್ಳದೇ ಉತ್ತಮವಾಗಿ ಸೌಹಾರ್ದವನ್ನು ನಡೆಸಿಕೊಂಡು ಹೋಗುತ್ತೇವೆ. ಸೌಹಾರ್ದಗಳು ಉತ್ತಮವಾಗಿ ನಡೆಯಲು ಆಯಾ ಆಡಳಿತ ಮಂಡಳಿಯಿಂದ ಮಾತ್ರ ಸಾಧ್ಯ ಎಂಬುವದನ್ನು ಗ್ರಾಹಕರು ತಿಳಿದುಕೊಳ್ಳಬೇಕು. ನಾವು ನಮ್ಮ ಸೌಹಾರ್ದದ ಐದನೇ ಶಾಖೆಯನ್ನು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಇಂದು ಆರಂಭಿಸಲಾಗಿದೆ. ಈ ಭಾಗದ ಜನರು ನಮ್ಮ ಸೌಹಾರ್ದದ ಸದುಪಯೋಗ ಪಡೆದುಕೊಳ್ಳಬೇಕು. ಆರನೇ ಶಾಖೆಯನ್ನು ಸಾವಳಗಿಯಲ್ಲಿ ಆರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ತಾಳಿಕೋಟಿ, ಇಂಡಿ ಸೇರಿದಂತೆ ವಿವಿಧೆಡೆ ನಮ್ಮ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಸೌಹಾರ್ದದ ಸ್ಥಳೀಯ ಸಮಿತಿ ಅಧ್ಯಕ್ಷ ಬಿ.ಆರ್.ಅಡ್ಡೋಡಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸೌಹಾರ್ದದ ಉಪಾಧ್ಯಕ್ಷ ಶರಣಬಸಪ್ಪ ಗುಡ್ಡೋಡಗಿ, ಸ್ಥಳೀಯ ಸಮಿತಿಯ ಸದಸ್ಯರಾದ ಡಾ.ಮಹಾಂತೇಶ ಜಾಲಗೇರಿ, ಡಾ.ಬಸವರಾಜ ಗುಬ್ಬ, ಸುನೀಲ ದುಂಬಾಳೆ, ಸಂತೋಷ ಲಮಾಣಿ, ಸಿದ್ದು ಸಾಸನೂರ, ಸಿ.ಪಿ.ಪಾಟೀಲ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಸೌಹಾರ್ದದ ಮಾರ್ಗದರ್ಶಕರಾದ ವಿಜಯಕುಮಾರ ಕನಮಡಿ, ಶಂಕರಗೌಡ ಪಾಟೀಲ, ಅಶೋಕ ಖಾಡಗಿ, ಎಸ್.ಕೆ.ಗೊಂಗಡಿ, ಸೌಹಾರ್ದದ ಸಿಇಓ ವಿಜಯ ಜತ್ತಿ, ಮುಖ್ಯ ವ್ಯವಸ್ಥಾಪಕ ಪ್ರತಾಪ, ಮುಖಂಡರಾದ ಡಾ.ಮಹಾಂತೇಶ ಬಿರಾದಾರ, ಜಗದೀಶ ಕೊಟ್ರಶೆಟ್ಟಿ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಲ.ರು.ಗೊಳಸಂಗಿ, ಎಂ.ಜಿ.ಆದಿಗೊಂಡ, ಸುರೇಶ ಪಾಟೀಲ, ಸುರೇಶ ಹಾರಿವಾಳ, ರಮೇಶ ಯಳಮೇಲಿ, ಎಸ್.ಎಸ್.ಹಿರೇಮಠ, ರಾಜು ಪಾಟೀಲ, ರಮಜಾನ ಮುಜಾವರ, ಪ್ರವೀಣ ಪಾಟೀಲ, ಚೇತನ ಮಠಪತಿ, ಚನ್ನಬಸು ಮುರಾಳ ಇತರರು ಇದ್ದರು.