*– ಸಂಪದಾ ಹಿರೇಮಠ*
ನಿಡಗುಂದಿ: ಇಲ್ಲೊಂದು ಮನಕಲಕುವ ಸುದ್ದಿ. ಚಾಮರ ತಮ್ಮೆದುರಿಗಿದೆ. ಚಿಕ್ಕ ವಯಸ್ಸಿನ ಬಾಲಕಿಯೊಬ್ಬಳು ಇನ್ನಿಲ್ಲದ ನರಕಯಾತನೆ ಕ್ಷಣಕ್ಷಣವೂ ಅನುಭವಿಸಿ ಕಣ್ಣೀರಲ್ಲಿ ಉಸರಿಸುತ್ತಿದ್ದಾಳೆ. ಅವಳ ಬದುಕು ಅಯೋಮಯ. ಹೆತ್ತವರ ಕರುಳು ಕಿತ್ತಿ ಬರುವಂತಿದೆ. ದೇವರ ಆಟದ ಮುಂದೆ ಕೈಚೆಲ್ಲಿ ಕುಳಿತಿದೆ. ಆ ಕುಟುಂಬ ! ಈಗೇನಿದ್ದರೂ ಮಾನವೀಯ ಮೌಲ್ಯ ಮೆರೆಯಬೇಕಾಗಿದೆ. ಹೃದಯವಂತರು ನೆರವಿಗೆ ಧಾವಿಸಬೇಕಾಗಿದೆ. ಆ ದೈವ ನಿರೀಕ್ಷೆಯೇ ಅವಳ ಪಾಲಿಗೆ ಹೊಸ ಬದುಕು ಕಲ್ಪಿಸಿ ಕೊಡಬಹುದೇನೋ…?
ಹಾಗಾದರೆ ಈ ಬರಹಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಮನಸ್ಸು ಮಾನವೀಯತ್ತ ವಾಲಿದರೆ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಿ. ಪುಣ್ಯದ ಫಲದಲೊಂದು ಪರೋಪಕಾರದ ನೆಮ್ಮದಿಯ ಸಂತೃಪ್ತ ಭಾವ ಕಾಣಿಯಷ್ಟೇ.!
ಮಗುವಿನ ಕಥೆ ವ್ಯಥೆ ಹೀಗಿದೆ..
ನೋಡಿ ! ನಿಡಗುಂದಿ ತಾಲ್ಲೂಕಿನ ಯಲ್ಲಮ್ಮನ ಬೂದಿಹಾಳ ಗ್ರಾಮದ 14 ವರ್ಷದ ಬಾಲಕಿ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತೀವ್ರ ನೋವಿನ ಯಾತನಾಮಯದಲ್ಲಿ ಜೀವನ ಸಾಗಿಸುತ್ತಿದ್ದಾಳೆ.
ಅವಳ ಹೆಸರು ಮಂಗಲಾ ಹನುಮಂತ ವಾಲೀಕಾರ,ವಯಸ್ಸು 14. ಬಲಗಾಲಿನ ಮೊಣಕಾಲು ಸಂಪೂರ್ಣ ದಪ್ಪವಾಗಿದ್ದು, ಏಳಲು ಕೂಡಾ ಆಗದ ಸ್ಥಿತಿಯಲ್ಲಿ ನಿತ್ಯ ನರಳುತ್ತಿದ್ದಾಳೆ.
ಹಾಸಿಗೆಯಲ್ಲಿಯೇ ಎಲ್ಲಾ ಕಾರ್ಯಗಳು ನಡೆಯುತ್ತಿದ್ದು, ತಾಯಿ ಚಂದ್ರಕಲಾ ಮಗುವನ್ನು ಅಳುತ್ತಲೇ ಆರೈಕೆ ಮಾಡುತ್ತಿದ್ದಾಳೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ತಂದೆ ಹನುಮಂತ ಕಿಡ್ನಿ ತೊಂದರೆಯಿಂದ ಮೃತಪಟ್ಟಿದ್ದು, ತಾಯಿ ಚಂದ್ರಕಲಾ ಕೂಲಿ ನಾಲಿ ಮಾಡಿ ಈ ಬಾಲಕಿಯ ಆರೈಕೆ ಮಾಡುತ್ತಿದ್ದಾಳೆ. ಯಾವುದೇ ಜಮೀನು ಇಲ್ಲ, ಮನೆ ಕೂಡಾ ಇಲ್ಲ. ಚಿಕ್ಕದಾದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಕಳೆದ ವರ್ಷ 8 ನೇ ವರ್ಗದಲ್ಲಿದ್ದಾಗ ಸ್ನೇಹ ಸಮ್ಮಿಲನದಲ್ಲಿ ನೃತ್ಯವನ್ನು ಮಾಡಿದ್ದ ಈ ಬಾಲಕಿ ಓದಿನಲ್ಲಿಯೂ ಚುರುಕಾಗಿದ್ದಳು. ಈ ವರ್ಷ 9 ನೇ ವರ್ಗ ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯಲ್ಲಿ ಈಕೆ ಕಲಿಯುತ್ತಿದ್ದಾಳೆ. ಕಳೆದ ಐದು ತಿಂಗಳ ಹಿಂದೆ ಸಣ್ಣದಾಗಿ ಆರಂಭಗೊಂಡ ಕಾಲು ನೋವು ಈಗ ಮೂಳೆ ಕ್ಯಾನ್ಸರ್ ಮಟ್ಟಕ್ಕೆ ಬೆಳೆದು ಬಂದಿದೆ. ಒಂದೊಂದೇ ಮೂಳೆಗಳ ಬೇನೆ ಆರಂಭಗೊಂಡಿದೆ. ಬಾಗಲಕೋಟೆ, ವಿಜಯಪುರದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಅನೇಕ ಬಾರಿ ತಪಾಸಣೆ ನಡೆಸಿದಾಗ, ಅದು ಮೂಳೆ ಕ್ಯಾನ್ಸರ್ ಎಂದು ಪತ್ತೆಯಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಹಣಕಾಸಿನ ತೊಂದರೆಯ ಕಾರಣ ಬಾಲಕಿಯನ್ನು ಮನೆಗೆ ಕರೆತಂದು ಇಲ್ಲಿಯೇ ಆರೈಕೆ ಮಾಡುತ್ತಿದ್ದಾಳೆ ತಾಯಿ ಚಂದ್ರಕಲಾ !
ಬಹು ನೋವಿನಿಂದ ಬಾಲಕಿ ಬಳಲುತ್ತಿದ್ದು, ಆಕೆಯ ನೋವಿಗೆ ಸ್ಪಂದಿಸಬೇಕಿದೆ. ಕೂಲಿನಾಲಿ ಮಾಡಿ ಬದುಕು ಸಾಗಿಸುವ ಈ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ.
ಪೂರ್ತಿ ಗುಣಮುಖರಾಗಲು ಹಲವು ಲಕ್ಷಗಳ ಹಣಕಾಸಿನ ಅಗತ್ಯವಿದೆ ಎಂದು ಖಾಸಗಿ ವೈದ್ಯರು ಹೇಳಿದ್ದಾರೆ. ಕನಿಷ್ಠ ನೋವು ರಹಿತ ಬದುಕು ಸಾಗಿಸಲಾದರೂ ಹಣಕಾಸಿನ ನೆರವಿನ ಆಸರೆ ಬೇಕಿದೆ. ಸಂಘ, ಸಂಸ್ಥೆ, ದಾನಿಗಳು ಈಕೆಯ ಸಹಾಯ ಹಾಗೂ ಆರೋಗ್ಯಕ್ಕೆ ನೆರವಾಗಲು ಈ ಕೆಳಕಂಡವರನ್ನು ಸಂಪರ್ಕಿಸಲು ತಾಯಿ ಚಂದ್ರಕಲಾ ವಿನಂತಿಸಿದ್ದಾರೆ.
ವಿಳಾಸ : ಚಂದ್ರಕಲಾ ಹನುಮಂತ ವಾಲೀಕಾರ, ಸಾ:ಯಲ್ಲಮ್ಮನಬೂದಿಹಾಳ, ತಾ: ನಿಡಗುಂದಿ, ಜಿ: ವಿಜಯಪುರ,
ಫೋನ್ ಪೇ ಸಂಖ್ಯೆ: 9699712590
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಡಗುಂದಿ ಶಾಖೆಯ ಎಸ್.ಬಿ. ಖಾತೆ ಸಂಖ್ಯೆ: 41720274398
ಐಎಫ್ ಎಸ್ ಸಿ ಕೋಡ್: ಎಸ್ ಬಿಐಎನ್ 0002243
ಮೂಳೆ ಕ್ಯಾನ್ಸರ್‌ನಿಂದ ನರಳುತ್ತಿರುವ ಬಾಲಕಿ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ
Related Posts
Add A Comment