ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಶ್ರೀ ಮಾಳಿಂಗರಾಯ ದೇವರ ಸಪ್ತಾಹದ ಅಂಗವಾಗಿ ಆದಿಶಕ್ತಿ ಚಿಂಚಲಿ ಶ್ರೀ ಮಾಯಮ್ಮ ತಾಯಿಯ ಹಬ್ಬವನ್ನು ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಪಕ್ಷದ ಇಂಡಿ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ, “ಶ್ರೀ ಮಾಯಮ್ಮ ತಾಯಿಯು ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟರ ಸಂಹಾರಕ್ಕಾಗಿ ಭೂಮಿಯ ಮೇಲೆ ಅವತರಿಸಿದ ಸಾಕ್ಷಾತ್ ಆದಿಶಕ್ತಿಯಾಗಿದ್ದಾಳೆ. ಇಂದಿನ ದಿನಗಳಲ್ಲಿ ದೇಶದ ಬೆನ್ನೆಲುಬಾದ ರೈತರು ಕೃಷಿ ವೆಚ್ಚದ ಹೆಚ್ಚಳ, ಬೆಳೆ ನಷ್ಟ ಹಾಗೂ ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಕಷ್ಟ-ಕಾರ್ಪಣ್ಯಗಳು ದೂರವಾಗಿ, ಉತ್ತಮ ಮಳೆಯಾಗಿ, ಬೆಳೆಗಳು ಸಮೃದ್ಧಿಯಾಗುವ ಮೂಲಕ ನಾಡಿನ ಅನ್ನದಾತರು ಸುಖ-ಶಾಂತಿಯಿAದ ಬದುಕುವಂತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸೋಣ” ಎಂದರು.
ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಪ್ರಭುರಾಜ್ ಸುರೇಶ್ ಡೆಂಗಿ, ಮಾಳು ಸಾವ್ಕಾರ್ ಹೊನ್ನುಗೊಂಡ, ಯಲ್ಲಾಲಿಂಗ ಸಿ. ಹೂಗಾರ, ಸುಭಾಷ್ ಅಚ್ಚಿಗೇರ್, ಬಾಗು ಸೌಕಾರ್ ಹೂಗಾರ್, ಶಂಕರ್ ಆಸಂಗಿ, ಚಿದಾನಂದ ಪರುಗೊಂಡ, ರಮೇಶ್ ಪರುಗೊಂಡ, ಶಿವಪ್ಪ ಕವಡಿ, ಬಂಡು ಅಲ್ಲಬಗೊಂಡ, ಭೀಮರಾಯ ಬಬಲಾದಿ, ತುಕಾರಾಂ ಕವಡಿ ಸೇರಿದಂತೆ ಗ್ರಾಮದ ಹಿರಿಯರು, ಯುವ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

